Job News- ಭೂಸಾರಿಗೆ ನಿರ್ದೇಶನಾಲಯ- 12 ಡಾಟಾ ಅನಾಲಿಸ್ಟ್, ಸ್ಪೆಷಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭೂಸಾರಿಗೆ ನಿರ್ದೇಶನಾಲಯ- 12 ಡಾಟಾ ಅನಾಲಿಸ್ಟ್, ಸ್ಪೆಷಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ನಗರ ಭೂ ಸಾರಿಗೆ ನಿರ್ದೇಶನಾಲಯದಲ್ಲಿ 12 ಡಾಟಾ ಅನಾಲಿಸ್ಟ್, ಐಟಿಎಸ್ ಸ್ಪೆಷಲಿಸ್ಟ್, ಸಿಎಡಿ ಟೆಕ್ನೀಶಿಯನ್, ಅಸಿಸ್ಟೆಂಟ್ ಸಿವಿಲ್ ಇಂಜಿನಿಯರ್, ಕಮ್ಯುನಿಕೇಶನ್ ಸ್ಪೆಷಲಿಸ್ಟ್, ಅಸೋಸಿಯೇಟ್ ಅರ್ಬನ್ ಪ್ಲಾನರ್, ಅಸೋಸಿಯೇಟ್ ಟ್ರಾನ್ಸ್‌ಪೋರ್ಟ್ ಪ್ಲಾನರ್ ಮತ್ತು ಚೀಫ್ ಟೆಕ್ನಿಕಲ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆ ದಿನ: ಮೇ 24,2022
ವಿದ್ಯಾರ್ಹತೆ : ಪದವಿ, ಸ್ನಾತಕೋತ್ತರ ಪದವಿ, ಬಿ.ಇ/ಬಿ.ಟೆಕ್, ಡಿಪ್ಲೋಮಾ ವಿದ್ಯಾರ್ಹತೆಯನ್ನು ಪಡೆದಿರಬೇಕು.
ವಯೋಮಿತಿ : ನೇಮಕಾತಿ ನಿಯಮಾನುಸಾರ ವಯೋಮಿತಿಯನ್ನು ಹೊಂದಿರಬೇಕು. ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ವೇತನ : ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು ಎಂದು ನೇಮಕಾತಿ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ
ಅರ್ಜಿ ಸಲ್ಲಿಕೆ : ಆಸಕ್ತಅಭ್ಯರ್ಥಿಗಳ ಅನುಕೂಲಕ್ಕಾಗಿ ಅಧಿಕೃತ ವೆಬ್‌ಸೈಟ್ https://dult.karnataka.gov.in/ ನಲ್ಲಿ ನೇಮಕಾತಿ ಅಧಿಸೂಚನೆ ನೀಡಲಾಘಿದೆ. ಅದನ್ನು ಓದಿ ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳ ಜೊತೆ ಸಲ್ಲಿಸಬಹುದು.