-->
Murder in saloon- 20 ರೂ. ಚೌಕಾಶಿಗೆ ನಡೆಯಿತು ಕೊಲೆ: ಸೆಲೂನ್ ಮಾಲಕನಿಂದ ಕಸ್ಟಮರ್ ಹತ್ಯೆ

Murder in saloon- 20 ರೂ. ಚೌಕಾಶಿಗೆ ನಡೆಯಿತು ಕೊಲೆ: ಸೆಲೂನ್ ಮಾಲಕನಿಂದ ಕಸ್ಟಮರ್ ಹತ್ಯೆ

20 ರೂ. ಚೌಕಾಶಿಗೆ ನಡೆಯಿತು ಕೊಲೆ: ಸೆಲೂನ್ ಮಾಲಕನಿಂದ ಕಸ್ಟಮರ್ ಹತ್ಯೆ







ಕೇವಲ ಹೇರ್ ಕಲರ್ ಹಾಕುವ ಕ್ಷುಲಕ ವಿಚಾರಕ್ಕೆ ಕೊಲೆಯೊಂದು ನಡೆದಿದೆ. ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಅಸಂಗಿಯಲ್ಲಿ ಈ ಘಟನೆ ನಡೆದಿದೆ.



ಹೇರ್ ಕಲರ್ ರೇಟ್ ವಿಚಾರದಲ್ಲಿ ಸೆಲೂನ್ ಮಾಲಕ ಹಾಗೂ ಗ್ರಾಹಕನ ನಡುವೆ ಜಗಳ ನಡೆಯಿತು. ಈ ಜಗಳ ತಾರಕಕ್ಕೇರಿ ಹೇರ್ ಕಲರ್ ಹಾಕುತ್ತಿದ್ದ ಮಾಲೀಕನೇ ಗ್ರಾಹಕನನ್ನು ಹತ್ಯೆ ಮಾಡಿದ್ದಾನೆ. ಮೃತ ಗ್ರಾಹಕನನ್ನು ರಬಕವಿ ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮದ ಸಾಗರ್ ಅವಟಿ (22) ಎಂದು ಗುರುತಿಸಲಾಗಿದೆ.



ಇಲ್ಲಿನ ಪ್ರಜ್ವಲ್ ಜೆಂಟ್ಸ್ ಪಾರ್ಲರ್ ಗೆ ತಲೆಕೂದಲಿನ ಹೇರ್ ಕಲರ್ ಹಾಕಿಸಲು ಸಾಗರ್ ಅವಟಿ ತೆರಳಿದ್ದ. ಸಲೂನ್ ಪಾರ್ಲರ್ ಮಾಲೀಕ ಸದಾಶಿವ ನಾವಿ ಕಲರ್ ಹಾಕಲು ಮುಂದಾಗಿದ್ದಾನೆ. ಹೇರ್ ಕಲರ್ ಹಾಕಲು 20 ರೂಪಾಯಿ ಕೊಡುವುದಾಗಿ ಅವಟ್ಟಿ ಹೇಳಿದ್ದಾನೆ.



ಇದರ ರೇಟ್ ಕುರಿತ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಇದು ಅತಿರೇಕಕ್ಕೆ ಹೋಗಿ ಸೆಲೂನ್ ಮಾಲೀಕ ಸದಾಶಿವ ನಾವಿ ಕೋಪಗೊಂಡು ಸಾಗರ್ ಅವಟಿಯ ಎದೆ ಭಾಗಕ್ಕೆ ಕತ್ತರಿಯಿಂದ ಚುಚ್ಚಿದ್ದಾನೆ.



ತೀವ್ರ ರಕ್ತ ಸ್ರಾವದಿಂದ ಒದ್ದಾಡುತ್ತಿದ್ದ ಸಾಗರ್ ಅವಟಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಸಾಗರ್ ಅವಟಿ ಮೃತಪಟ್ಟಿದ್ದಾನೆ. ಈ ಮೂಲಕ ಹೇರ್ ಕಲರ್ ಹಾಕುವ ಕ್ಷುಲಕ ವಿಚಾರ ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಬನಹಳ್ಳಿ ಪೋಲಿಸರು ಆರೋಪಿ ಸದಾಶಿವ ನಾವಿಯನ್ನು ಬಂಧಿಸಿದ್ದಾರೆ.



end

Ads on article

Advertise in articles 1

advertising articles 2

Advertise under the article