ಶಂಕರನಾರಾಯಣ: ಪತ್ನಿಯ ಹೊಡೆದು ಕೊಂದು ಹಂತಕ ಪತಿ ಪರಾರಿ
Wednesday, May 18, 2022
ಮಂಗಳೂರು: ಮದ್ಯ ವ್ಯಸನಿ ಪತಿ ಪತ್ನಿಯನ್ನೇ ಹೊಡೆದು ಕೊಂದಿರುವ ಘಟನೆ ವಂಡಾರು ಗ್ರಾಮದ ಕಟ್ಟೆಕೊಡ್ಲು ಎಂಬಲ್ಲಿ ನಡೆದಿದೆ.
ಕಟ್ಟೆಕೊಡ್ಲು ನಿವಾಸಿ ಅನಿತಾ(35) ಕೊಲೆಯಾದ ದುರ್ದೈವಿ ಮಹಿಳೆ. ಸುರೇಂದ್ರ ನಾಯ್ಕ್(42) ಕೊಲೆ ಆರೋಪಿ.
ಸುರೇಂದ್ರ ನಾಯ್ಕ್ ಹಾಗೂ ಅನಿತಾ ವಿವಾಹ 15 ವರ್ಷಗಳ ಹಿಂದೆ ನಡೆದಿತ್ತು. ಕಟ್ಲೆಕೂಡುವಲ್ಲಿ ವಾಸಿಯಾಗಿರುವ ಸುರೇಂದ್ರ ನಾಯ್ಕ್ ಕೂಲಿ ಕೆಲಸ ಮಾಡುತ್ತಿದ್ದ. ದಂಪತಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ವಿಪರೀತ ಮದ್ಯಸೇವನಿಯಾಗಿದ್ದ ಸುರೇಂದ್ರ ನಾಯ್ಕ್ ದಿನನಿತ್ಯ ಪತ್ನಿ ಹಾಗೂ ಮಕ್ಕಳಿಗೆ ಹೊಡೆಯುತ್ತಿದ್ದ ಎನ್ನಲಾಗಿದೆ.
ನಿನ್ನೆಯೂ ಸುರೇಂದ್ರ ನಾಯ್ಕ್ ಪತ್ನಿ ಅನಿತಾಗೆ ಹೊಡೆದಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆ ಬಳಿಕ ಆರೋಪಿ ಸುರೇಂದ್ರ ನಾಯ್ಕ್ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.