ಪುತ್ತೂರು: ಹಾಡಹಗಲೇ ಬಸ್ ನಿಲ್ದಾಣದಲ್ಲಿ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ; ಕಾಮುಕ ಅರೆಸ್ಟ್
Monday, May 9, 2022
ಪುತ್ತೂರು: ಹಾಡಹಗಲೇ ಅಪ್ರಾಪ್ತ ಬಾಲಕಿಗೆ ಕಾಮುಕನೋರ್ವನು ಲೈಂಗಿಕ ಕಿರುಕುಳ ನೀಡಿರುವ ಘಟನೆಯೊಂದು ಪುತ್ತೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸರಳೀಕಟ್ಟೆ ನಿವಾಸಿ ನೌಫಲ್ (28) ಎಂಬಾತ ಬಂಧಿತ ಕಾಮುಕ
ಗದಗ ಮೂಲದ ಬಾಲಕಿ ಪುತ್ತೂರು ಸರಕಾರಿ ಬಸ್ ನಿಲ್ದಾಣದ ಬಳಿ ಇದ್ದ ಸಂದರ್ಭ ಆರೋಪಿ ನೌಫಲ್ ಅಲ್ಲಿಗೆ ಬಂದಿದ್ದಾನೆ. ಬಳಿಕ ಆಕೆಯೊಂದಿಗೆ '10 ನಿಮಿಷ ನನ್ನ ಜೊತೆ ಬರುತ್ತೀಯಾ, ನಾನು ನಿನಗೆ ಹಣ ಕೊಡುತ್ತೇನೆ' ಎಂದು ಅಮಿಷವೊಡ್ಡಿ ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದಾನೆ ಎನ್ನಲಾಗ್ತಿದೆ.
ಬಾಲಕಿ ಈ ವಿಚಾರವನ್ನು ತನ್ನ ಪೋಷಕರ ಬಳಿ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.