-->
ಮದುವೆಗೆ ಇನ್ನೇನು ಎರಡು ದಿನ ಇರುವಾಗಲೇ ಕಾಮುಕ ವರ ಮಾಡಿದ್ದೇನು ಗೊತ್ತೇ?

ಮದುವೆಗೆ ಇನ್ನೇನು ಎರಡು ದಿನ ಇರುವಾಗಲೇ ಕಾಮುಕ ವರ ಮಾಡಿದ್ದೇನು ಗೊತ್ತೇ?

ನಾಗ್ಪುರ​(ಮಹಾರಾಷ್ಟ್ರ): ತನ್ನ ವಿವಾಹಕ್ಕೆ ಇನ್ನೇನು ಕೇವಲ ಎರಡೇ ದಿನ ಇರುವಾಗಲೇ ಕಾಮುಕನೋರ್ವನು ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಾಗ್ಪುರದ ಗಿಟ್ಟಿಖಾಡನ್​​​ನಲ್ಲಿ  ನಡೆದಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಭಾರತೀಯ ವಾಯುಸೇನೆಯಲ್ಲಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ಆದಿತ್ಯಧನರಾಜ್​ ನರೇಶ್​ ಶಾಹು(28) ಎಂಬಾತ ಬಂಧಿತ ಆರೋಪಿ.

ಆರೋಪಿ ಆದಿತ್ಯ ಧನರಾಜ್​ ನರೇಶ್​ ಶಾಹು ವಾಯುಪಡೆಯಲ್ಲಿ ಕಾರ್ಪೋರಲ್​ ಆಗಿ ಸೇವೆ ಸಲ್ಲಿಸುತ್ತಿದ್ದನು. ಈತನಿಗೆ ಮೇ 12ರಂದು ಮದುವೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಈತ ರಜೆಯ ಮೇಲೆ ಊರಿಗೆ ಬಂದಿದ್ದನು. ಮದುವೆಗೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿಯೇ ಅದೇ ಗ್ರಾಮದ ಮನೆಯೊಂದಕ್ಕೆ ನುಗ್ಗಿ 15ರ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಯಾರಿಗಾದರೂ ಈ ಬಗ್ಗೆ ಹೇಳಿದರೆ ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾನೆ.

ಪೋಷಕರು ಮನೆಗೆ ವಾಪಸ್​ ಆದ ಸಂದರ್ಭ ತನ್ನ ಮೇಲೆ ಕಾಮುಕ ಎಸಗಿರುವ ದುಷ್ಕೃತ್ಯದ ಬಗ್ಗೆ ಬಾಲಕಿ ಹೇಳಿಕೊಂಡಿದ್ದಾಳೆ. ತಕ್ಷಣ ಆಕೆಯ ಪೋಷಕರು ಪೊಲೀಸ್ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ. 

ಆದಿತ್ಯಧನರಾಜ್​ ಮದುವೆಯಾಗಲಿರುವ ಯುವತಿ ಬೇರೊಂದು ರಾಜ್ಯದವಳಾಗಿದ್ದಳು.  ಇವರ ಮದುವೆ ನಾಗ್ಪುರ​​ದಲ್ಲಿ ನಿಯೋಜನೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ವಧು ಹಾಗೂ ಆಕೆಯ ಕುಟುಂಬಸ್ಥರು ನಾಗ್ಪುರಕ್ಕೆ ಆಗಮಿಸಿದ್ದರು. ನಾಗ್ಪುರಕ್ಕೆ ಬರುತ್ತಿದ್ದಂತೆ ಆದಿತ್ಯಧನರಾಜ್ ಮಾಡಿರುವ ಕೃತ್ಯದ ಬಗ್ಗೆ ಅವರಿಗೆ ತಿಳಿದು ಬಂದಿದ್ದು, ಅವರು ದಿಢೀರ್​ ಶಾಕ್​​​ಗೊಳಗಾಗಿದ್ದಾರೆ.

Ads on article

Advertise in articles 1

advertising articles 2

Advertise under the article