ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ದೂರ ಉಳಿಯಲಿದ್ದಾರಂತೆ: ಕಾರಣವೇನು ಗೊತ್ತೇ?
Friday, May 13, 2022
ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯಗಿರುವ ನಟಿಯರ ಪೈಕಿ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಕೂಡ ಓರ್ವರು. ಆದರೆ ಅವರ ಪತಿ ರಾಜ್ ಕುಂದ್ರಾ ಪೋರ್ನ್ ವೀಡಿಯೋ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾದಾಗ ಆ ಕೇಸ್ನಲ್ಲಿ ಶಿಲ್ಪಾ ಹೆಸರು ಕೂಡ ಥಳಕು ಹಾಕಿಕೊಂಡಿತ್ತು. ಈ ಪ್ರಕರಣದ ವಿಚಾರಣೆ ಇನ್ನೂ ಕೋರ್ಟ್ನಲ್ಲಿ ಇದೆ.
ಆಗ ಸಾಮಾಜಿಕ ಜಾಲತಾಣಗಳಿಂದ ಕೊಂಚ ಕಾಲ ದೂರವಿದ್ದ ಶಿಲ್ಪಾ ಮತ್ತೆ ಸಕ್ರಿಯರಾಗಿದ್ದರು. ಆದರೆ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ಸಮಯ ದೂರವಿರುತ್ತೇನೆಙದು ನಟಿ ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಿಂದ ದೂರವಿರುತ್ತೇನೆ ಎಂದು ಪೋಸ್ಟ್ ಮಾಡಿರುವ ಶಿಲ್ಪಾ ಶೆಟ್ಟಿ ಬ್ರೇಕ್ ತಗೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಯಾವುದೇ ಫೋಟೋ ಹಾಕಿಕೊಳ್ಳದೇ ಖಾಲಿ ಬಿಟ್ಟಿದ್ದಾರೆ ನಟಿ. ಈ ಕುರಿತು ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ, ನಾನು ಹೊಸ ಅವತಾರವನ್ನು ಕಂಡುಕೊಳ್ಳುವವರೆಗೂ ಸಾಮಾಜಿಕ ಜಾಲತಾಣಗಳಿಂದ ದೂರ ಇರುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ. ಇವೆಲ್ಲಾ ತುಂಬಾ ಬೋರ್ ಬೋರ್ ಅನಿಸುತ್ತಿದೆ, ಎಲ್ಲವೂ ಏಕತಾನತೆ ಎಂದೆನಿಸುತ್ತಿದೆ. ಆದ್ದರಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿಯುತ್ತಿದ್ದೇನೆ. ಹೊಸ ಅವತಾರದಲ್ಲಿ ಬರುವವರೆಗೆ ಎಲ್ಲರಿಗೂ ಬೈ ಬೈ ಎಂದಿದ್ದಾರೆ. ಇದು ಶಿಲ್ಪಾ ಶೆಟ್ಟಿ ಅಭಿಮಾನಿಗಳಲ್ಲಿ ಮಾತ್ರ ಬೇಸರ ತರಿಸಿದೆ.