ಪುತ್ರನ ಪಬ್ ಜಿ ಹುಚ್ಚಾಟಕ್ಕೆ ತಾಯಿ ಬಲಿ: ಗುಂಡಿಕ್ಕಿ ಹತ್ಯೆ ಮಾಡಿದ ತಂದೆ ಜೈಲುಪಾಲು
Thursday, May 26, 2022
ಚಿಕ್ಕಮಗಳೂರು: ಪುತ್ರ ಪಬ್ ಜಿ ಹುಚ್ಚಿಗೆ ಹೆತ್ತತಾಯಿಯೇ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಾಗಲಖಾನ್ ಎಸ್ಟೇಟ್ನಲ್ಲಿ ನಡೆದಿದೆ. ಗುಂಡಿಕ್ಕಿ ಹತ್ಯೆ ಮಾಡಿರುವ ತಂದೆ ಜೈಲುಪಾಲಾಗಿದ್ದಾನೆ.
ಮೈಮುನಾ (40) ಹತ್ಯೆಯಾದ ಮಹಿಳೆ ಎಂದು ತಿಳಿದು ಬಂದಿದೆ.
ಪಬ್ ಜಿ ಆಡುತ್ತಿದ್ದ ಪುತ್ರನಿಗೆ ತಂದೆ ಬೈದಿದ್ದಾನೆ. ಪ್ರತಿಯಾಗಿ ಮಗನೂ ತಂದೆನೊಂದಿಗೆ ಜಗಳಕ್ಕಿಳಿದಿದ್ದಾನೆ. ಪರಿಣಾಮ ಕೋಪಗೊಂಡ ತಂದೆ ನಿನ್ನನ್ನೀಗ ಸಾಯಿಸುತ್ತೇನೆಂದು ಪುತ್ರನ ವಿರುದ್ಧ ತೋಟದ ಕೋವಿಯನ್ನು ಹಿಡಿದಿದ್ದಾನೆ.
ಪುತ್ರನಿಗೆ ತಂದೆ ಹೊಡೆಯುತ್ತಾರೆಂದು ತಾಯಿ ಅಡ್ಡ ಬಂದಿದ್ದಾರೆ. ಆದರೆ ಮದ್ಯದ ಮತ್ತಿನಲ್ಲಿದ್ದ ತಂದೆ ಗುಂಡು ಹಾರಿಸಿಯೇ ಬಿಟ್ಟಿದ್ದಾನೆ. ಪರಿಣಾಮ ಮೈಮುನಾ ಕುಸಿದು ಬಿದ್ದಿದ್ದಾರೆ.
ತಕ್ಷಣ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲು ಯತ್ನಿಸಿದರೂ ಮೈಮನಾ ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದಾಳೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಇದೀಗ ಪತ್ನಿಯನ್ನು ಹತ್ಯೆ ಮಾಡಿರುವ ಪತಿ ಇಮ್ತಿಯಾಸ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.