ಒಂದೂವರೆ ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು!
Monday, May 23, 2022
ಮಂಗಳೂರು: ಒಂದೂವರೆ ವರ್ಷದ ಮಗುವಿನೊಂದಿಗೆ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ತಾಯಿಯ ದುಡುಕಿನ ನಿರ್ಧಾರದಿಂದ ಏನೂ ಅರಿಯದ ಮುಗ್ಧ ಹಸುಗೂಸು ಕೂಡಾ ಬಲಿಯಾಗಿದೆ.
ಕೋಲಾರ ಜಿಲ್ಲೆಯ ಬಂಗಾರುಪೇಟೆ ಜಿಲ್ಲೆಯ ಸೂಲಿಕುಂಟೆ ಗ್ರಾಮ ನಿವಾಸಿ ಕೀರ್ತಿ (23) ಹಾಗೂ ಒಂದೂವರೆ ವರ್ಷದ ಯೋಗಶ್ರೀ ಮೃತಪಟ್ಟವರು.
ಕೌಟುಂಬಿಕ ಕಲಹವೇ ಈ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ. ಪೊಲೀಸರು ಕೀರ್ತಿಯವರ ಪತಿ ಸುಧಾಕರ್ ಅವರನ್ನು ವಿಚಾರಣೆ ನಡೆಸುತ್ತಿದ್ದರು. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.