ಆಥಿಯಾ ಶೆಟ್ಟಿ - ಕೆ.ಎಲ್.ರಾಹುಲ್ ವಿವಾಹ ನಿರ್ಧಾರಕ್ಕೆ ತನ್ನ ಆಶೀರ್ವಾದವಿದೆ ಎಂದ ಸುನೀಲ್ ಶೆಟ್ಟಿ
Friday, May 13, 2022
ಮುಂಬೈ: ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ತಮ್ಮ ಪುತ್ರಿ ಆಥಿಯಾ ಶೆಟ್ಟಿ ಒಳ್ಳೆಯ ಗೆಳೆಯರು. ಅವರು ತಮ್ಮ ಜೀವನದ ಬಗ್ಗೆ ಯಾವ ನಿರ್ಧಾರವನ್ನು ತೆಗೆದುಕೊಂಡರೂ ಅದಕ್ಕೆ ನನ್ನ ಆಶೀರ್ವಾದವಿದೆ. ಅವರು ಯಾವಾಗ ವಿವಾಹವಾಗುತ್ತಾರೋ, ಅದು ಅವರಿಗೆ ಬಿಟ್ಟದ್ದು ಎಂದು ಬಾಲಿವುಡ್ ನಟ ಸುನಿಲ್ ಶೆಟ್ಟಿ ಮದುವೆ ವದಂತಿಗೆ ತೆರೆ ಎಳೆದಿದ್ದಾರೆ.
ನಟಿ ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟ್ ಆಟಗಾರ ಕೆ.ಎಲ್. ರಾಹುಲ್ ತಾವಿಬ್ಬರೂ ಡೇಟಿಂಗ್ ಮಾಡುತ್ತಿರುವುದಾಗಿ ಎಲ್ಲೂ ಅಧಿಕೃತವಾಗಿ ದೃಢಪಡಿಸಿಲ್ಲ. ಆದರೂ ಈ ವರ್ಷದ ಕೊನೆಯಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ವಂದಂತಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮವೊಂದರಲ್ಲಿ, ಸುನೀಲ್ ಶೆಟ್ಟಿ ಅವರನ್ನು ಈ ಬಗ್ಗೆ ಮಾಧ್ಯಮದ ಮಂದಿ ಪ್ರಶ್ನೆ ಕೇಳಿದಾಗ, ಅವರು ಪ್ರತಿಕ್ರಿಯಿಸಿ "ರಾಹುಲ್ ಎಂದರೆ ತನಗೆ ಬಹಳ ಇಷ್ಟ" ಎಂದ ಅವರು ಮದುವೆಯ ವದಂತಿಗಳು ನಿಜವೋ ಸುಳ್ಳೋ ಎಂಬುದನ್ನು ಹೇಳಲು ನಿರಾಕರಿಸಿದರು.
"ಆಥಿಯಾ ಶೆಟ್ಟಿ ನನ್ನ ಪುತ್ರಿ, ಅವಳು ಯಾವಾಗ ಬೇಕಾದರೂ ಮದುವೆಯಾಗುತ್ತಾಳೆ. ನನ್ನ ಪುತ್ರನಿಗೂ ಮದುವೆ ಆಗಬೇಕೆಂದು ನಾನು ಬಯಸುತ್ತೇನೆ. ಎಷ್ಟು ಬೇಗ ಆಗುತ್ತದೆಯೋ ಅಷ್ಟು ಒಳ್ಳೆಯದು. ಆದರೆ ವಿವಾಹ ಅವರ ಆಯ್ಕೆಯಾಗಿದೆ. ರಾಹುಲ್ ಒಳ್ಳೆಯ ಹುಡುಗ, ನನಗೂ ಇಷ್ಟವಾಗಿದ್ದಾನೆ. ಅವರಿಗೆ ಬೇಕಾದನ್ನು ನಿರ್ಧರಿಸುವ ಸ್ವಾತಂತ್ರ್ಯ ಅವರಿಗಿದೆ. ಏಕೆಂದರೆ ಕಾಲ ಬದಲಾಗಿದೆ. ಅವರ ಜೀವನದ ಬಗ್ಗೆ ಅವರೇ ನಿರ್ಧಾರ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವರ ನಿರ್ಧಾರಕ್ಕೆ ನನ್ನ ಆಶೀರ್ವಾದ ಯಾವಾಗಲೂ ಇರುತ್ತದೆ ಎಂದು ಸುನಿಲ್ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದರು.
ಅಥಿಯಾ ಮತ್ತು ರಾಹುಲ್ ಇಬ್ಬರೂ ತಮ್ಮ ಫೋಟೊ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುತ್ತಾರೆ. ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ನಟಿ ಅಥಿಯಾ ಶೆಟ್ಟಿ ಕೊನೆಯದಾಗಿ ಮೋತಿಚೂರ್ ಚಕ್ನಾಚೂರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.