ಮಂಗಳೂರು: ಬಾವಿಗೆ ಬಿದ್ದು ಬೊಬ್ಬೆ ಇಡುತ್ತಿದ್ದ ಯುವಕ; ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣೆ
Wednesday, May 4, 2022
ಮಂಗಳೂರು: ನಗರದ ಕುಂಟಿಕಾನದ ಬಳಿ ತಡರಾತ್ರಿ ವೇಳೆ ರಸ್ತೆ ಬದಿಯೊಂದರಲ್ಲಿದ್ದ ಮನೆಯೊಂದರ ಬಾವಿಗೆ ಅಚಾನಕ್ಕಾಗಿ ಬಿದ್ದು ಗಾಯಗೊಂಡಿದ್ದ ಯುವಕನೋರ್ವನನ್ನು ಕದ್ರಿ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಸ್ಸಾಂ ಮೂಲದ ಸುಮಾರು 26 ವರ್ಷದ ಯುವಕನೋರ್ವನು ರಕ್ಷಣೆಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತ ನಿನ್ನೆ ತಡರಾತ್ರಿ ರಸ್ತೆ ಬದಿಯಲ್ಲಿದ್ದ ಮನೆಯೊಂದರ ಬಾವಿಗೆ ಬಿದ್ದಿದ್ದ. ಮುಂಜಾನೆಗೆ ಬಾವಿಯೊಳಗಿನಿಂದ ಬೊಬ್ಬೆ ಕೇಳುತ್ತಿತ್ತು. ಸ್ಥಳೀಯರು ಬಂದು ನೋಡಿದಾಗ ಯುವಕನೋರ್ವನು ಬಾವಿಗೆ ಬಿದ್ದಿರುವುದು ತಿಳಿದುಬಂದಿದೆ. ಈ ಬಗ್ಗೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಕದ್ರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.