-->
'ಬಟ್ಟೆಯನ್ನು ಸರಿಸಿ ತೊಡೆಯನ್ನು ಸವರುತ್ತಿದ್ದ… ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ' 17ನೇ ವರ್ಷದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾದ ಬಗ್ಗೆ ಹೇಳಿಕೊಂಡ ನಟಿ ಕುಬ್ರಾ ಶೇಠ್

'ಬಟ್ಟೆಯನ್ನು ಸರಿಸಿ ತೊಡೆಯನ್ನು ಸವರುತ್ತಿದ್ದ… ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ' 17ನೇ ವರ್ಷದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾದ ಬಗ್ಗೆ ಹೇಳಿಕೊಂಡ ನಟಿ ಕುಬ್ರಾ ಶೇಠ್

ಮುಂಬೈ: ಹಲವಾರು ನಟಿಯರು ತಮಗಾಗಿರುವ ಲೈಂಗಿಕ ಕಿರುಕುಳದ ಕಹಿ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ‌ಇದೀಗ ಬಾಲಿವುಡ್​ ನಟಿ ಕುಬ್ರಾ ಸೇಠ್​ ಅವರು ತಮ್ಮ 17ನೇ ವಯಸ್ಸಿಗೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ. ಅದೂ ನಮ್ಮ ಬೆಂಗಳೂರಿನಲ್ಲಿ ಎಂಬ ಆಘಾತಕಾರಿ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.

'ಆತ ಕಾರಿನಲ್ಲಿ ಹೋಗುವ ಸಂದರ್ಭ ಬಟ್ಟೆಯನ್ನು ಸರಿಸಿ ನನ್ನ ತೊಡೆಯನ್ನು ಸವರುತ್ತಿದ್ದ… ನಮ್ಮ ಮನೆಗೆ ಬಂದು ನನ್ನ ಕೆನ್ನೆಗೆ ಮುತ್ತಿಟ್ಟು ನೀನಂದ್ರೆ ನನಗಿಷ್ಟ ಎನ್ನುತ್ತಿದ್ದ… ಹೋಟೆಲ್​ನಲ್ಲಿ ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ… ನಾನಾಗ ಅಸಹಾಯಕಳಾಗಿದ್ದೆ…’ ಎಂದು ಕುಬ್ರಾ ಸೇಠ್​ ಬರೆದುಕೊಂಡಿದ್ದಾರೆ. ಅವರು ನಟಿ ಮಾತ್ರವಲ್ಲ, ಲೇಖಕಿಯೂ ಹೌದು. ಇದೀಗ ಅವರು ಬರೆದಿರುವ ‘ಓಪನ್​ ಬುಕ್​'(Open Book: Not quite a Memoir) ಬಿಡುಗಡೆಯಾಗಿದೆ. ಈ ಪುಸ್ತಕಲ್ಲಿ ತಾನು ಬಾಲ್ಯದಲ್ಲಿ ಅನುಭವಿಸಿರುವ ಲೈಂಗಿಕ ಕಿರುಕುಳದ ಬಗ್ಗೆ ಎಳೆಎಳೆಯಾಗಿ ಬರೆದಿದ್ದಾರೆ. ಇದೀಗ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.  ‘

ನನಗಾಗ 17 ವರ್ಷ ವಯಸ್ಸು. ನಮ್ಮ ಕುಟುಂಬವು ಆರ್ಥಿಕವಾಗಿ ವಹಳ ಸಮಸ್ಯೆಯನ್ನು ಎದುರಿಸುತ್ತಿತ್ತು. ನಮ್ಮ ಅಮ್ಮನಿಗೆ ಬೆಂಗಳೂರಿನ ರೆಸ್ಟೋರೆಂಟ್​ ಮಾಲಕನೊಬ್ಬ (X ಅಂಕಲ್​) ಸಹಕರಿಸುತ್ತಿದ್ದ. ನಮ್ಮ ಮನೆಯಲ್ಲಿ ಆತನನ್ನು ದೇವರೆಂದೇ ಪರಿಗಣಿಸಿದ್ದರು. ನಾನು ಹಾಗೂ ನನ್ನ ಸಹೋದರ ಆತನನ್ನು ಅಂಕಲ್​ ಎಂದೇ ಕರೆಯುತ್ತಿದ್ದೆವು. ನಾನು, ನನ್ನಣ್ಣ ಡ್ಯಾನಿಷ್​ ಇಬ್ಬರೂ ಆತನ ರೆಸ್ಟೋರೆಂಟ್‌ಗೆ ಆಗಾಗ್ಗೆ ಹೋಗುತ್ತಿದ್ದವು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ದಿನಕಳೆದಂತೆ ಈ X ಅಂಕಲ್​ ತನ್ನ ವರಸೆಯನ್ನು ಬದಲಿಸಿದ್ದ. 

ಆತ ‘ತನ್ನನ್ನು ಅಂಕಲ್ ಎಂದು ಕರೆಯಬೇಡ’ ಎನ್ನುತ್ತಿದ್ದ. ಒಮ್ಮೆ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭ ಆತ ನನ್ನ ಬಟ್ಟೆಯನ್ನು ಸರಿಸಿ ತೊಡೆಯನ್ನು ಕೈಯಿಂದ ಉಜ್ಜುತ್ತಾ ನಗುತ್ತಿದ್ದ… ಆ ಕ್ಷಣ ನಾನು ಶಾಕ್​ ಆದೆ. ಅಲ್ಲದೆ ನಮ್ಮ ಮನೆಗೆ ಪದೇಪದೆ ಬರುತ್ತಿದ್ದ. ಆಗ ನನ್ನಮ್ಮ ಆತನಿಗೆ ಅಡುಗೆ ಮಾಡಿ ಬಡಿಸುತ್ತಿದ್ದಳು. ಅಮ್ಮನ ಮುಂದೆಯೇ ಆತ ನನ್ನ ಕೆನ್ನೆಗೆ ಮುತ್ತಿಡುತ್ತಿದ್ದ…’ ಒಮ್ಮೆ ಆತ ನನ್ನನ್ನು ಹೋಟೆಲ್​ಗೆ ಕರೆದೊಯ್ದು ನನ್ನ ತಲೆ ಹಿಡಿದು ತುಟಿಗೆ ಚುಂಬಿಸಿದ. 
ಆಗ ನಾನು ಗೊಂದಲಕ್ಕೆ ಒಳಗಾದೆ. ಒಂದು ಮಾತನ್ನೂ ಆಡಲಿಲ್ಲ, ನನಗೆ ಕೂಗಬೇಕೆನಿಸಿತ್ತು. ಆದರೆ ಕೂಗಲಾಗಲಿಲ್ಲ. ಅಲ್ಲಿಂದ ಓಡಬೇಕಿತ್ತು.. ಆದರೆ ಓಡಲಾಗಿಲ್ಲ. ನಾನು ಶಾಕ್​ನಲ್ಲಿದ್ದೆ. ಅವನು ತನ್ನ ಪ್ಯಾಂಟ್​ ಬಿಚ್ಚಿದ… ನನ್ನ ಕನ್ಯತ್ವ ಕಳೆದುಹೋಗುತ್ತಿದೆ… ಎಂದು ಅನ್ನಿಸುತ್ತಿತ್ತು’ ಎಂದು ತಾನು ಅನುಭಸಿದ ಕಿರುಕುಳದ ಬಗ್ಗೆ ನಟಿ ಕುಬ್ರಾಸೇಠ್​ ಪುಸ್ತಕದಲ್ಲಿ ವಿವರಿಸಿದ್ದಾರೆ.  

‘ಈ ಘಟನೆಯ ಬಳಿಕ X ಅಂಕಲ್​ ಬೇರೊಬ್ಬಳೊಂದಿಗೆ ವಿವಾಹವಾದ. ಎರಡು ಮಕ್ಕಳ ತಂದೆಯೂ ಆದ. ಆದರೆ ನನ್ನ ಮೇಲೆ ಆತ ಎಸಗಿರುವ ಕೃತ್ಯವನ್ನು ಹೊರಗಡೆ ಬಾಯಿಬಿಟ್ಟರೆ ಎಂಬ ಭಯವೂ ಆತನಿಗೆ ಇತ್ತು. ನನಗೆ ಜೀವ ಬೆದರಿಕೆಯನ್ನೂ ಹಾಕಿದ್ದ. ನಾನು ಆಗ ಈ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ’ ಎಂದು ಕುಬ್ರಾ ಸೇಠ್ ತನ್ನ ಬಾಲ್ಯದಲ್ಲಿ ಹಾಗೂ ಯೌವ್ವನದಲ್ಲಿ ಅನುಭವಿಸಿರುವ ನರಕ ಯಾತನೆ ಯನ್ನು ಆತ್ಮಚರಿತ್ರೆ ‘ಓಪನ್​ ಬುಕ್​’ನಲ್ಲಿ ಬಹಿರಂಗ ಮಾಡಿದ್ದಾರೆ. 

Ads on article

Advertise in articles 1

advertising articles 2

Advertise under the article