ಜೂನ್ 18 ರಿಂದ ಮಹಾಲಕ್ಷ್ಮಿ ಯೋಗ..! ಈ ರಾಶಿಗಳ ಜನರ ಅದೃಷ್ಟ ಬದಲಾಗಲಿದೆ..
Friday, June 10, 2022
ಮೇಷ ರಾಶಿ- ಜೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯ ಜಾತಕದಲ್ಲಿ ಈ ಯೋಗ ಎರಡನೆ ಮನೆ ಅಥವಾ ಭಾವದಲ್ಲಿ ನಿರ್ಮಾಣಗೊಳ್ಳುತ್ತಿದೆ. ಸಾಮಾನ್ಯವಾಗಿ ಇದನ್ನು ಧನ ಹಾಗೂ ವಾಣಿಯ ಸ್ಥಾನ ಎಂದು ಭಾವಿಸಲಾಗುತ್ತದೆ. ಹೀಗಾಗಿ ಆಕಸ್ಮಿಕ ಧನಲಾಭ ಪ್ರಾಪ್ತಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ವ್ಯಾಪಾರದಲ್ಲಿ ಧನಲಾಭ ಇರಲಿದೆ. ದೀರ್ಘಕಾಲದಿಂದ ನಿಮಗೆ ಬರಬೇಕಿದ್ದ ಹಣ ನಿಮ್ಮ ಬಳಿ ಬರಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ.
ಕರ್ಕ ರಾಶಿ- ಈ ರಾಶಿಯವರಿಗೆ ಬುಧ ಮತ್ತು ಶುಕ್ರರ ಸಂಯೋಜನೆಯಿಂದ ಲಾಭವಾಗಲಿದೆ. ಈ ರಾಶಿಯ 11 ನೇ ಭಾವದಲ್ಲಿ ಮಹಾಲಕ್ಷ್ಮಿ ಯೋಗ ನಿರ್ಮಾಣಗೊಳ್ಳುತ್ತಿದೆ. ಇದನ್ನು ಲಾಭ ಮತ್ತು ಆದಾಯದ ಭಾವ ಎಂದು ಕರೆಯಲಾಗುತ್ತದೆ. ಆದ್ದರಿಂದ, ಈ ಅವಧಿಯಲ್ಲಿ ಈ ಜನರ ಆದಾಯವು ಹೆಚ್ಚಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ವ್ಯಾಪಾರದಲ್ಲಿ ಲಾಭ ಇರಲಿದೆ. ಈ ಅವಧಿಯಲ್ಲಿ ದೊಡ್ಡ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆಯಿದೆ.
ಸಿಂಹ ರಾಶಿ- ಸಿಂಹ ರಾಶಿಯ ದಶಮ ಭಾವದಲ್ಲಿ ಲಕ್ಷ್ಮಿ ನಾರಾಯಣ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಭಾವ ನೌಕರಿ ಮತ್ತು ಕಾರ್ಯಕ್ಷೇತ್ರದ ಭಾವ ಎನ್ನಲಾಗುತ್ತದೆ. ಹೊಸ ನೌಕರಿಯ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಧನಲಾಭದ ಸಾಧ್ಯತೆ ಇದೆ.ಒಂದು ವೇಳೆ ಈಗಾಗಲೇ ನೀವು ನೌಕರಿಯಲ್ಲಿದ್ದರೆ, ಬಡ್ತಿ ಸಿಗಲಿದೆ. ಈ ಅವಧಿಯಲ್ಲಿ ತಾಯಿ ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರಲಿದೆ.