ಮಂಗಳೂರು: ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿದ್ದ ಫಾಸ್ಟ್ ಫುಡ್ ಹೊಟೇಲ್ ನೌಕರನಿಗೆ 20 ಸಾವಿರ ರೂ. ದಂಡ
Wednesday, June 8, 2022
ಮಂಗಳೂರು: ನಗರದ ಕಂಕನಾಡಿ ಮಾರುಕಟ್ಟೆ ಬಳಿಯ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿದ್ದ ಫಾಸ್ಟ್ ಫುಡ್ ಹೊಟೇಲ್ ನೌಕರನೋರ್ವನಿಗೆ ಮಂಗಳೂರು ಮನಪಾ 20 ಸಾವಿರ ರೂ. ದಂಡ ವಿಧಿಸಿದೆ.
ಕಂಕನಾಡಿಯ ಈ ಪ್ರದೇಶವು ತ್ಯಾಜ್ಯ ಎಸೆದು ಬ್ಲ್ಯಾಕ್ ಸ್ಪಾಟ್ ಎಂದೆನಿಸಿತ್ತು. ಆದ್ದರಿಂದ ಈ ಪ್ರದೇಶವನ್ನಿ ಮಹಾನಗರ ಪಾಲಿಕೆ ಸುಂದರೀಕರಣಗೊಳಿಸಿತ್ತು. ಆ ಬಳಿಕ ತ್ಯಾಜ್ಯ ಎಸೆಯುವುದು ನಿಯಂತ್ರಣಕ್ಕೆ ಬಂದಿತ್ತು.
ಆದರೆ ಕೆಲ ದಿನಗಳಿಂದ ಇಲ್ಲಿ ಮತ್ತೆ ಕಸ ಎಸೆಯಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ದಾಳಿ ನಡೆಸಿ ತ್ಯಾಜ್ಯ ಸುರಿಯುತ್ತಿದ್ದ ಫಾಸ್ಟ್ ಫುಡ್ ಹೊಟೇಲ್ ನೌಕರನಿಗೆ 20 ಸಾವಿರ ರೂ. ದಂಡ ವಿಧಿಸಿದ್ದಾರೆ.