-->
ಹೋಮ್ ವರ್ಕ್ ಮಾಡಿಲ್ಲವೆಂದು 5ವರ್ಷದ ಪುತ್ರಿಗೆ ತಾಯಿಯಿಂದಲೇ ಘೋರಶಿಕ್ಷೆ: ಇವಳೆಂಥ ಹೆತ್ತತಾಯಿ!

ಹೋಮ್ ವರ್ಕ್ ಮಾಡಿಲ್ಲವೆಂದು 5ವರ್ಷದ ಪುತ್ರಿಗೆ ತಾಯಿಯಿಂದಲೇ ಘೋರಶಿಕ್ಷೆ: ಇವಳೆಂಥ ಹೆತ್ತತಾಯಿ!

ದೆಹಲಿ: ಹೋಮ್ ವರ್ಕ್ ಮಾಡಿಲ್ಲವೆಂದು ಹೆತ್ತತಾಯಿಯೇ ತನ್ನ ಐದು ವರ್ಷದ ಪುತ್ರಿಗೆ ಘೋರಶಿಕ್ಷೆಯೊಂದನ್ನು ವಿಧಿಸಿದ್ದಾಳೆ‌.  ಶಿಕ್ಷೆಯ ಸಂಕಟ ತಾಳಲಾರದೆ ಆ ಮಗು ಒದ್ದಾಡುತ್ತಿರುವುದನ್ನು ಕಂಡು ಎಂಥಹಾ ಕಟುಕನ ಕರುಳಾದರೂ ಚುರ್ರ್... ಎನ್ನದೆ ಇರದು.

ಈ ಕಟುಕಿ ತಾಯಿ ಶಿಕ್ಷೆ ವಿಧಿಸಿರುವ ಘಟನೆ ನಡೆದಿರೋದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ. ಈ ಮಹಾತಾಯಿ ತನ್ನ ಪುತ್ರಿ ಹೋಮ್ ವರ್ಕ್ ಮಾಡಿಲ್ಲವೆಂದು ಕೈಕಾಲು ಕಟ್ಟಿ ಸುಡುಬಿಸಿಲಿನಲ್ಲಿ ಟೆರೆಸ್ ಮೇಲೆ ಮಲಗಿಸಿದ್ದಾಳೆ. ಈ ದೃಶ್ಯಾವಳಿಯ ವೀಡಿಯೋವನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳ ಪತ್ತೆಗೆ ತನಿಖೆ ನಡೆಸಿದ್ದಾರೆ. ಆಗ ಅದು ದೆಹಲಿಯ ಟುಕ್ ಮಿರ್ ಪುರ್ ನ ಖಜೂರಿ ಖಾಸ್ ಪುರ ಎಂದು ತಿಳಿದು ಬಂದಿದೆ‌.  ಪೊಲೀಸರು ತಾಯಿಯನ್ನು ಈ ಬಗ್ಗೆ ವಿಚಾರಣೆ ನಡೆಸಿದಾಗ ಹೋಮ್ ವರ್ಕ್ ಮಾಡಿಲ್ಲದ್ದಕ್ಕೆ ಪುತ್ರಿಗೆ ಶಿಕ್ಷೆ ವಿಧಿಸಿರೋದು ಸತ್ಯ. ಆದರೆ ಬರೀ 5-7 ನಿಮಿಷ ಮಾತ್ರ ಬಿಸಿಲಿಗೆ ಕಟ್ಟಿ ಹಾಕಿ ಒಳಗೆ ಕರೆತಂದಿದ್ದೇನೆ ಎಂಬುದಾಗಿ ಹೇಳಿಕೆ ನೀಡಿದ್ದಾಳೆ.

Ads on article

Advertise in articles 1

advertising articles 2

Advertise under the article