
ಮಾಜಿ ಪತಿಯ ಗೌರವ ಚ್ಯುತಿಯಾಗುವಂತೆ ಲೇಖನ ಬರೆದ ನಟಿ: ಪತಿ ನಟನಿಗೆ 78 ಕೋಟಿ ರೂ. ಪರಿಹಾರ ನೀಡಲು ಆದೇಶಿಸಿದ ಕೋರ್ಟ್
Saturday, June 4, 2022
ಮಂಗಳೂರು: ವಿಚ್ಛೇದನವಾದಾಗ ಪತಿ, ಪತ್ನಿಗೆ ಜೀವನಾಂಶ ನೀಡೋದು ಮಾಮೂಲಿ. ಆದರೆ ಇಲ್ಲೊಂದು ದಂಪತಿಯ ಕಲಹದಲ್ಲಿ ಕೋರ್ಟ್ ಪತ್ನಿಯೇ ಪತಿಗೆ ಪರಿಹಾರ ರೂಪದಲ್ಲಿ ಕೋಟ್ಯಂತರ ರೂ. ನೀಡಬೇಕೆಂದು ಆದೇಶಿಸಿದೆ.
ಹಾಲಿವುಡ್ ನ ಖ್ಯಾತ ತಾರಾ ದಂಪತಿಯ ಹಲವು ವರ್ಷಗಳ ಕಾನೂನು ಸಮರ ಕೊನೆಗೂ ಅಂತ್ಯಗೊಂಡಿದೆ. ಪತಿಯ ವಿರುದ್ದ ಕಾನೂನು ಸಮರಕ್ಕಿಳಿದ ಪತ್ನಿಗೆ ಕೋರ್ಟ್ 10 ಮಿಲಿಯನ್ (75 ಕೋಟಿ ರೂ.) ಪರಿಹಾರ ನೀಡಲು ಆದೇಶಿಸಿದೆ.
ಅನೇಕ ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದ ನಟ-ನಟಿಯರಾದ ಜ್ಯೂರಿ ಜಾನಿ ಡೆಪ್ ಹಾಗೂ ಅಂಬರ್ ಹರ್ಡ್ 2015ರಲ್ಲಿ ವಿವಾಹವಾಗಿದ್ದರು. ಆದರೆ ಈ ತಾರಾ ದಂಪತಿ ನಡುವೆ ಒಂದೇ ವರ್ಷದಲ್ಲಿ ಕಲಹವುಂಟಾಗಿದೆ. ಈ ಕಲಹ ವಿಕೋಪಕ್ಕೆ ಹೋಗಿ ಇಬ್ಬರೂ ವಿಚ್ಛೇದನ ಪಡೆದಿದ್ದರು. ಆದರೆ ಮಾಜಿ ಪತಿಗೆ ಬುದ್ಧಿ ಕಲಿಸಬೇಕೆಂದು ಹೋದ ಅಂಬರ್ ಹರ್ಡ್ ಆತನ ವಿರುದ್ಧ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದರು. ಇದು ಭಾರೀ ಪ್ರಚಾರ ಪಡೆದಿತ್ತು. ಯಾವುದೇ ಹುರುಳಿಲ್ಲದೆ ಮಾಜಿ ಪತ್ನಿ ತಮ್ಮ ವಿರುದ್ಧ ಮಾನಹಾನಿಯಾಗುವಂತೆ ಬರೆದಿದ್ದಾರೆ ಎಂದು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಧೀಶರು ಈ ಲೇಖನ ನಟನ ಗೌರವಕ್ಕೆ ಧಕ್ಕೆ ತರುವಂತಿದೆ. ಆದ್ದರಿಂದ ಪರಿಹಾರ ರೂಪವಾಗಿ ಅಂಬರ್ ಹರ್ಡ್ ಅವರು ನಟ ಜಾನಿ ಡೆಪ್ ಗೆ 10 ಮಿಲಿಯನ್ ಡಾಲರ್ ಮೊತ್ತ ಹಾಗೂ ದಂಡವಾಗಿ 5 ಮಿಲಿಯನ್ ಮೊತ್ತವನ್ನು ಪಾವತಿಸಲು ಆದೇಶಿಸಿದೆ.