ಮಂಗಳೂರು: ನಿದ್ದೆಯ ಮಂಪರಿನಲ್ಲಿ ವಾಹನ ಚಲಾಯಿಸಿ ಅಪಘಾತ; ತಂದೆ - ಮಗಳು ಮೃತ್ಯು
Saturday, June 4, 2022
ಮಂಗಳೂರು: ನಸುಕಿನ ವೇಳೆ ನಿದ್ದೆಯ ಮಂಪರಿನಲ್ಲಿ ಚಲಾಯಿಸಿಕೊಂಡು ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿರುವ ಪರಿಣಾಮ ತಂದೆ - ಮಗಳು ಮೃತಪಟ್ಟ ಘಟನೆ ನಗರದ ಹೊರವಲಯದಲ್ಲಿರುವ ಗಂಜಿಮಠದ ಸೂರಲ್ಪಾಡಿಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ರಾಣಿಬೆನ್ನೂರು ಮೂಲದ ಪುಂಡಲೀಕಪ್ಪ(62) ಹಾಗೂ ಅವರ ಮಗಳು ಅಶ್ವಿನಿ(29) ಮೃತಪಟ್ಟವರು.
ಪುಂಡಲೀಕಪ್ಪನವರಿಗೆ ಅನಾರೋಗ್ಯವಿದ್ದ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಕಾರಿನಲ್ಲಿ ಕರೆತರಲಾಗುತ್ತಿತ್ತು. ಇವರು ಕುಟುಂಬ ಸಹಿತ ಜೂನ್ 2ರಂದು ರಾತ್ರಿ ಹೊರಡಿದ್ದಾರೆ. ನಸುಕಿನ ವೇಳೆ ಅವರು ಕಾರಿನಲ್ಲಿ ಮೂಡುಬಿದಿರೆಯಿಂದ ಮಂಗಳೂರಿಗೆ ಬರುತ್ತಿದ್ದರು. ಈ ವೇಳೆ ಗಂಜಿಮಠ ಸೂರಲ್ಪಾಡಿ ಬಳಿ ಬರುತ್ತಿದ್ದಂತೆ ಕಾರು ಮರವೊಂದಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಅಶ್ವಿನಿಯವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತೀವ್ರವಾಗಿ ಗಾಯಗೊಂಡ ಪುಂಡಲೀಕ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಉಳಿದಂತೆ ಅಶ್ವಿನಿಯವರ ಪತಿ ಸಂತೋಷ್, ಪುತ್ರಿ ಶ್ರೇಯಾ, ತಾಯಿ ಪುಷ್ಪಾ ಕಾರು ಚಾಲಕ ಸುಹೈಲ್ ಗಾಯಗೊಂಡಿದ್ದಾರೆ. ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿಕೊಂಡು ಬಂದಿರೋದೇ ಈ ಅಪಘಾತ ಕಾರಣ ಎಂದು ಹೇಳಲಾಗುತ್ತಿದೆ.