ಕಾರು ಢಿಕ್ಕಿಯಾಗಿ ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತ್ಯು: ಕಾರಿನಲ್ಲಿದ್ದವರು ಪರಾರಿ
Monday, June 27, 2022
ಮಂಗಳೂರು: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮೂವರೂ ಸ್ಥಳದಲ್ಲಿಯೇ ದುರ್ಮರಣಕ್ಕೀಡಾದ ಘಟನೆ ಧಾರವಾಡದ ಎನ್ಎಚ್ 4ರ ವೆಂಕಟಾಪುರ ಬಳಿ ನಡೆದಿದೆ.
ಕಾರು ಅಪಘಾತದ ತೀವ್ರತೆಗೆ ಬೈಕ್ ನಲ್ಲಿದ್ದ ಬೊಗೂರು ಗ್ರಾಮದ ಕಲ್ಲವ್ವ ಹರಿಜನ, ಸುಶೀಲವ್ವ ಹರಿಜನ ಹಾಗೂ ತಿಗಡೊಳ್ಳಿ ನಿವಾಸಿ ರಾಜು ಮೃತಪಟ್ಟಿದ್ದಾರೆ. ಇವರು ಧಾರವಾಡ ಸಿಟಿಗೆ ನೇರಳೆ ಹಣ್ಣು ಮಾರಲೆಂದು ಹೋಗುತ್ತಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ಬಳಿಕ ಕಾರಿನಲ್ಲಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಬಗ್ಗೆ ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.