ಕಾಸರಗೋಡು: ಸಂಚರಿಸುತ್ತಿದ್ದ ರೈಲಿಗೆ ನವಿಲು ಡಿಕ್ಕಿ: ಗಾಯಗೊಂಡ ಚಾಲಕ
Monday, June 27, 2022
ಕಾಸರಗೋಡು: ಚಲಿಸುತ್ತಿದ್ದ ರೈಲೊಂದಕ್ಕೆ ನವಿಲು ಢಿಕ್ಕಿಯಾದ ಪರಿಣಾಮ ಇಂಜಿನ್ ಗಾಜು ಒಡೆದು ಚಾಲಕ ಗಾಯಗೊಂಡಿರುವ ಘಟನೆ ರವಿವಾರ ನಡೆದಿದೆ.
"ಕೊಯಮುತ್ತೂರ್ ಎಕ್ಸ್ ಪ್ರೆಸ್ ಸ್ಪೆಷಲ್ ಟ್ರೈನ್” ಮಂಗಳೂರಿನಿಂದ ಕೊಯಮುತ್ತೂರು ಕಡೆಗೆ ನಿನ್ನೆ ಬೆಳಗ್ಗೆ 9 ಗಂಟೆಗೆ ಸಾಗುತಿತ್ತು. ಈ ವೇಳೆ ಕುಂಬ್ಳೆ - ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವೇಳೆ ರೈಲಿಗೆ ನವಿಲು ಢಿಕ್ಕಿಯಾಗಿ ರೈಲಿನ ಗ್ಲಾಸ್ ಒಡೆದಿದೆ. ಪರಿಣಾಮ ರೈಲು ಚಾಲಕ ಶಾಜಿ ಎಂಬವರಿಗೆ ಸಣ್ಣ ಗಾಯವಾಗಿದೆ.
ಒಂದು ಗಂಟೆ ಕಾಲ ರೈಲು ಕಾಸರಗೋಡು ನಿಲ್ದಾಣದಲ್ಲಿ ನಿಂತು ಬಳಿಕ ಬೇರೆ ಇಂಜಿನ್ ಜೋಡಿಸಿ ಪ್ರಯಾಣ ಮುಂದುವರಿಸಿದೆ ಎಂದು ತಿಳಿದು ಬಂದಿದೆ.