ನೋಂದಾವಣೆ ರಹಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ
ನೋಂದಾವಣೆ ರಹಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ
ಕರಾವಳಿ ಜಿಲ್ಲೆಯಲ್ಲಿ KPME ಕಾಯ್ದೆಯಡಿ ನೋಂದಾವಣೆ ಆಗದ ಮತ್ತು ನವೀಕರಣಗೊಳ್ಳದ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ 1994 ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಎಸ್ಟಾಬ್ಲಿಷ್ ಮೆಂಟ್ ಕಾಯ್ದೆಯ ಅನುಷ್ಠಾನ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
KPME ಕಾಯ್ದೆ ಮತ್ತು ಕಾನೂನು ಉಲ್ಲಂಘನೆ ಮಾಡುವ ಸೆಂಟರ್ ಗಳ ಸ್ಕ್ಯಾನಿಂಗ್ ಉಪಕರಣಗಳನ್ನು ವಶಕ್ಕೆ ಪಡೆದು ಅದನ್ನು ಮುಚ್ಚಬೇಕು, KPMEA ಅಡಿಯಲ್ಲಿ ನೋಂದಣಿಯಾಗದ ಮತ್ತು ನವೀಕರಣವಾಗದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ವಹಿಸಬೇಕು,
ಸ್ಯಾಂಪಲ್ ಕಲೆಕ್ಷನ್ ಲ್ಯಾಬ್ ಗಳು ಕೂಡ ಕಡ್ಡಾಯವಾಗಿ ನೋಂದಾವಣೆ ಆಗಿರಬೇಕು ಮತ್ತು ನೋಂದಾವಣೆಗೊಳ್ಲದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಮಾರ್ ತಾಕೀತು ಮಾಡಿದರು.
ಫೈರ್ ಅಂಡ್ ಸೇಫ್ಟಿ ನಿಯಮ ಅನುಸರಿಸಬೇಕು. ಅಗ್ನಿ ದುರಂತ ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದ ಅವರು, ಲಿಂಗ ಅನುಪಾತದ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು, ಆಸಕ್ತ NGOಗಳು ಅಥವಾ ಸಂಘ-ಸಂಸ್ಥೆಗಳ ಮೂಲಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.
ತಾಯ್ತನದ ಹೊಸ್ತಿಲಲ್ಲಿ ಇರುವ ಎಲ್ಲರಿಗೂ ತಾಯಿ ಕಾರ್ಡ್ ಕಡ್ಡಾಯವಾಗಿ ನೀಡಬೇಕು. ಖಾಸಗಿ ಆರೋಗ್ಯ ಸಂಸ್ಥೆಗಳು ಆನ್‌ಲೈನ್ ಮೂಲಕ ಕಡ್ಡಾಯವಾಗಿ ಈ ಮಹಿಳೆಯರ ಮಾಹಿತಿಯನ್ನು ನಮೂದಿಸಬೇಕು ಎಂದು ಅವರು ಸೂಚಿಸಿದರು.