![ಮಂಗಳೂರು: ಯುವಕನ ಮೇಲೆ ದುಷ್ಕರ್ಮಿಗಳಿಂದ ಮಾರಕಾಯುಧದಿಂದ ದಾಳಿ ಮಂಗಳೂರು: ಯುವಕನ ಮೇಲೆ ದುಷ್ಕರ್ಮಿಗಳಿಂದ ಮಾರಕಾಯುಧದಿಂದ ದಾಳಿ](https://blogger.googleusercontent.com/img/b/R29vZ2xl/AVvXsEjchHohjIhu2oP1ovPQ8TgbGBGdLwnPTtbWLE8xwdghOFeGQcsI-d9SfRxBYx4vZhBX4l-fxWae-YUGOxM6xPRpOk4vmOBM-hw_KhdAb1njlDJDzAim5slVQBykWQlCqAjUR9MVQ9EnJcUl/s1600/1654532483518875-0.png)
ಮಂಗಳೂರು: ಯುವಕನ ಮೇಲೆ ದುಷ್ಕರ್ಮಿಗಳಿಂದ ಮಾರಕಾಯುಧದಿಂದ ದಾಳಿ
Monday, June 6, 2022
ಬೈಕಂಪಾಡಿ: ಯುವಕನೋರ್ವನ ಮೇಲೆ ದುಷ್ಕರ್ಮಿಗಳಿಬ್ಬರು ಮಾರಕಾಯುಧದಿಂದ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ಬೈಕಂಪಾಡಿ ಬಳಿಯ ಮೀನಕಳಿಯ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ರಾಜಾ ಅಲಿಯಾಸ್ ರಾಘವೇಂದ್ರ(28) ಮಾರಕಾಯುಧದಿಂದ ದಾಳಿಗೊಳಗಾದವನು.
ದುಷ್ಕರ್ಮಿಗಳಿರಿಬ್ಬರು ಮಾರಕಾಯುಧಗಳಿಂದ ದಾಳಿಗೊಳಗಾದ ರಾಘವೇಂದ್ರ ಗಂಭೀರ ಸ್ಥಿತಿಯಲ್ಲಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಗೊಳಗಾದ ರಾಘವೇಂದ್ರ ಈ ಹಿಂದೆ ಎರಡು - ಮೂರು ಪ್ರಕರಣಗಳಲ್ಲಿ ಆರೋಪಿಯಾಗಿದ್ದನೆಂದು ತಿಳಿದು ಬಂದಿದೆ. ಈತನ ಮೇಲೆ ಪಣಂಬೂರು ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿತ್ತು. ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ನಡೆಸಿದವರು ಆತನ ಸ್ನೇಹಿತರು ಎಂದು ತಿಳಿದು ಬಂದಿದ್ದು, ಕೊಲೆಯತ್ನಕ್ಕೆ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.