ಮಂಗಳೂರು: ಅಂತಾರಾಷ್ಟ್ರೀಯ ಬೈಕ್ ರೈಡರ್ ಸೈಯದ್ ಮುಹಮ್ಮದ್ ಸಲೀಂ ತಂಙಳ್ ಇನ್ನಿಲ್ಲ
Tuesday, June 7, 2022
ಮಂಗಳೂರು: ಏಕಾಂಗಿಯಾಗಿ ದೇಶ - ವಿದೇಶಗಳಿಗೆ ಬೈಕ್ ನಲ್ಲಿಯೇ ಸಂಚರಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಬೈಕ್ ರೈಡರ್ ಅಲ್ಪಕಾಲದ ಅನಾರೋಗ್ಯದಿಂದ ಇಂದು ಮೃತಪಟ್ಟಿದ್ದಾರೆ.
ಉಳ್ಳಾಲ ನಗರದ ಅಳೇಕಲದ ನಿವಾಸಿ ಸೈಯದ್ ಮುಹಮ್ಮದ್ ಸಲೀಂ ತಂಙಳ್ (31) ಮೃತಪಟ್ಟ ಬೈಕ್ ರೈಡರ್.
ಅವಿವಾಹಿತರಾಗಿದ್ದ ಸೈಯದ್ ಮುಹಮ್ಮದ್ ಸಲೀಂ ತಂಙಳ್ ಕೆಲವು ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಮಧ್ಯಾಹ್ನ ಅವರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಬೈಕ್ ರೈಡರ್ ಆಗಿ ದೇಶ - ವಿದೇಶಗಳಲ್ಲಿ ಸಂಚಾರ ಮಾಡಿದ್ದ ಇವರು ಕುವೈಟ್ ನಲ್ಲಿ ಉದ್ಯೋದಲ್ಲಿದ್ದರು. ಇವರು ಬುಲೆಟ್‌ನಲ್ಲೇ 12,635 ಕಿ.ಮೀ. ಭಾರತ ಸೇರಿದಂತೆ ನೇಪಾಳ, ಭೂತಾನ್ ಗಳನ್ನು 39 ದಿನಗಳಲ್ಲಿ ಏಕಾಂಗಿಯಾಗಿ ಸಂಚರಿಸಿ ಗಮನ ಸೆಳೆದಿದ್ದರು.