-->
ಷಷ್ಟಿ, ಆಶ್ಲೇಷ ನಕ್ಷತ್ರ, ರಜಾದಿನ ಹಿನ್ನಲೆ. ಕುಕ್ಕೆಯಲ್ಲಿ ಭಾರೀ ಜನಸ್ತೋಮ..

ಷಷ್ಟಿ, ಆಶ್ಲೇಷ ನಕ್ಷತ್ರ, ರಜಾದಿನ ಹಿನ್ನಲೆ. ಕುಕ್ಕೆಯಲ್ಲಿ ಭಾರೀ ಜನಸ್ತೋಮ..

Kadaba
ಸುಬ್ರಹ್ಮಣ್ಯ

ವಿಶ್ವ ಪ್ರಸಿದ್ಧ ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಂದು ರವಿವಾರ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.

ಷಷ್ಠಿ,ಆಶ್ಲೇಷ ನಕ್ಷತ್ರ ಮತ್ತು ಶ್ರೀ ದೇವರು ಒಳಾಂಗಣ ಪ್ರವೇಶಿಸುವ ಪುಣ್ಯ ದಿನ ಸೇರಿದಂತೆ ರಜಾದಿನವು ಆಗಿರುವುದರಿಂದ ಕ್ಷೇತ್ರಕ್ಕೆ ಭಕ್ತರ ಜನಸಮೂಹವೇ ಹರಿದು ಬಂದಿದೆ. ಇಂದಿನ ದಿನ ಷಷ್ಠಿ, ಆಶ್ಲೇಷ ನಕ್ಷತ್ರ ಇರುವುದರಿಂದ ಆಶ್ಲೇಷ ಪೂಜೆ ಮಾಡಿಸಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೆಚ್ಚಿನ ಭಕ್ತರು ಆಗಮಿಸಿದ್ದಾರೆ. ಕುಕ್ಕೆಯ ರಾಜಗೋಪುರದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ವರೆಗೂ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ. ಶನಿವಾರ ರಾತ್ರಿಯಿಂದಲೇ ಕುಕ್ಕೆ ಕ್ಷೇತ್ರಕ್ಕೆ ಭಕ್ತರು ಆಗಮಿಸಿದ್ದರು.ಈ ಕಾರಣದಿಂದ ದೇವಳದ ವಸತಿ ಗೃಹ ಹಾಗೂ ಖಾಸಗಿ ವಸತಿ ಗೃಹಗಳೂ ಸಂಪೂರ್ಣವಾಗಿ ತುಂಬಿವೆ. ಶ್ರೀ ಕುಕ್ಕೆ ದೇವಳದ ಷಣ್ಮುಖ ಪ್ರಸಾದ ಭೋಜನ ಶಾಲೆಯ ಮೇಲ್ಮಹಡಿ ಮತ್ತು ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಭಕ್ತರಿಗೆ ತಂಗಲು ದೇಗುಲದಿಂದ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Related Posts

Ads on article

Advertise in articles 1

advertising articles 2

Advertise under the article