-->
ಮಂಗಳೂರು: ನೂಪರ್ ಶರ್ಮಾ ಗೆ ಬೆಂಬಲ ವ್ಯಕ್ತಪಡಿಸಿದವನ ರುಂಡ ಕತ್ತರಿಸಿದ ದುಷ್ಕರ್ಮಿಗಳು; ಪ್ರಧಾನಿ ಮೋದಿಯವರಿಗೂ ಜೀವ ಬೆದರಿಕೆ!

ಮಂಗಳೂರು: ನೂಪರ್ ಶರ್ಮಾ ಗೆ ಬೆಂಬಲ ವ್ಯಕ್ತಪಡಿಸಿದವನ ರುಂಡ ಕತ್ತರಿಸಿದ ದುಷ್ಕರ್ಮಿಗಳು; ಪ್ರಧಾನಿ ಮೋದಿಯವರಿಗೂ ಜೀವ ಬೆದರಿಕೆ!

ರಾಜಸ್ಥಾನ: ತಮ್ಮ ವಿವಾದಿತ ಹೇಳಿಕೆಯಿಂದ ದೇಶ - ವಿದೇಶದಲ್ಲೂ   ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿರುವ ಯುವಕನ ರುಂಡವನ್ನೇ ಕಡಿದು ದುಷ್ಕರ್ಮಿಗಳು ಕ್ರೌರ್ಯ ಮೆರೆದಿದ್ದಾರೆ. ಈ ಯುವಕ ನೂಪುರ್ ಶರ್ಮಾ ಪರವಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ. ಅದರ ಬೆನ್ನಲ್ಲೇ ಈ ರೀತಿಯಲ್ಲಿ ಆತ ಬಲಿಯಾಗಿದ್ದಾನೆ.

ದುಷ್ಕರ್ಮಿಗಳಿಬ್ಬರು ಈ ಯುವಕನನ್ನು ರಾಜಸ್ಥಾನದ ಉದಯಪುರದ ಮಲ್ಡಾಸ್ ಸ್ಟ್ರೀಟ್ ನಲ್ಲಿ ಹತ್ಯೆ ಮಾಡಿದ್ದಾರೆ. ಈ ಕೊಲೆಯ ದೃಶ್ಯದ ವೀಡಿಯೋವನ್ನು ವೈರಲ್ ಮಾಡಿರುವ ದುಷ್ಕರ್ಮಿಗಳು ಪ್ರಧಾನಿ ಮೋದಿಯವರನ್ನು ಕೊಲೆ ಮಾಡುವ ಬೆದರಿಕೆಯೊಡ್ಡಿದ್ದಾರೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಿಎಂ ಗೆಹ್ಲೊಟ್ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಾರ್ವಜನಿಕರು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿರುವ ಅವರು ಈ ಭಯಾನಕ ಕೃತ್ಯದ ವೀಡಿಯೋ ವೈರಲ್ ಮಾಡದಂತೆ ಕೋರಿದ್ದಾರೆ.

Ads on article

Advertise in articles 1

advertising articles 2

Advertise under the article