-->
BSNL ಗ್ರಾಹಕರಿಗೆ ಭರ್ಜರಿ ಆಫರ್: ಏನೆಲ್ಲ ಪ್ಲ್ಯಾನ್ ಇದೆ ಗೊತ್ತಾ...?

BSNL ಗ್ರಾಹಕರಿಗೆ ಭರ್ಜರಿ ಆಫರ್: ಏನೆಲ್ಲ ಪ್ಲ್ಯಾನ್ ಇದೆ ಗೊತ್ತಾ...?

BSNL ಗ್ರಾಹಕರಿಗೆ ಭರ್ಜರಿ ಆಫರ್: ಏನೆಲ್ಲ ಪ್ಲ್ಯಾನ್ ಇದೆ ಗೊತ್ತಾ...?


ಸರ್ಕಾರಿ ಒಡೆತನದ BSNL 'ಭಾರತ್ ಫೈಬರ್' ಯೋಜನೆ ಅಡಿಯಲ್ಲಿ 100-150 Mbps ವೇಗ, ಓವರ್-ದಿ-ಟಾಪ್ (ಒಟಿಟಿ) ಮತ್ತು ಇತರ ಅನುಕೂಲಗಳೊಂದಿಗೆ ಕೈಗೆಟುಕುವ ದರದಲ್ಲಿ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಿದೆ.






749 ರೂ. ಮತ್ತು 999 ರೂ.ಗಳಿಂದ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ ಆರಂಭವಾಗುತ್ತದೆ.

ರೂ. 749ರ 'ಸೂಪರ್‌ಸ್ಟಾರ್ ಪ್ರೀಮಿಯಂ-1' ಯೋಜನೆ ಅಡಿಯಲ್ಲಿ, BSNL 100 Mbps ವೇಗದಲ್ಲಿ ಬರೋಬ್ಬರಿ 1000 GB ಡೇಟಾ ನೀಡುತ್ತಿದೆ. ಡೇಟಾ ಮುಗಿದ ನಂತರವೂ ಕೂಡಾ 5 Mbps ವೇಗವಾಗಿ ಇಂಟರ್‌ನೆಟ್ ಕಾರ್ಯನಿರ್ವಹಣೆ ಮಾಡಲಿದೆ.



ಇದರ ಜೊತೆಗೆ ಈ ಪ್ಲ್ಯಾನ್‌ನಲ್ಲಿ ಉಚಿತ Fixed ಲೈನ್ ಸಂಪರ್ಕ ಲಭ್ಯವಿದೆ. ಈ ನಡುವೆ ಸೋನಿ ಲೈವ್ (Sony Liv), ಝೀ 5 (ZEE5) ಪ್ರೀಮಿಯಂ, YUPPTV ಮತ್ತು VOOT ಗೆ ಉಚಿತ ಚಂದಾದಾರಿಕೆಗಳು ಕೂಡಾ ಈ BSNL ಪ್ಲ್ಯಾನ್‌ನ ಭಾಗವಾಗಿದೆ.



ರೂ. 999 ರೀಚಾರ್ಜ್ 'ಸುಪ್ರೀಂ ಸ್ಟಾರ್ ಪ್ರೀಮಿಯಂ ಪ್ಲಸ್' ಪ್ಲ್ಯಾನ್‌ನಲ್ಲಿ ಬರೋಬ್ಬರಿ 2000 GB ಡೇಟಾ ಸಿಗುತ್ತದೆ. 150 Mbps ವೇಗದಲ್ಲಿ ನೆಟ್ ಸೌಲಭ್ಯ, ಡೇಟಾ ಖಾಲಿಯಾದ ನಂತರ, ಡೇಟಾ ಮಿತಿ 10 Mbps ಇರುತ್ತದೆ. ಈ ಪ್ಲ್ಯಾನ್‌ನಲ್ಲಿ Disney ಪ್ಲಸ್, Hotstar, ZEE-5, Sony Liv, Voot, Lions Gate, Hungama, YuppTV ಮತ್ತು Shemaro ಚಂದಾದಾರಿಕೆ ಉಚಿತವಾಗಿ ಸಿಗಲಿದೆ.


ಪ್ಲ್ಯಾನ್ ಪಡೆಯುವುದು ಹೇಗೆ...?


BSNL ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಎಲ್ಲ ಮಾಹಿತಿಯೂ ಲಭ್ಯವಿದೆ. ಅದರಲ್ಲಿ ನೀವು ನಿಮ್ಮ ದೂರವಾಣಿ ಸಂಖ್ಯೆ ಮತ್ತು capcha ಕೋಡ್ ಹಾಕಬೇಕು. ನಂತರ Get OTP ಬಟನ್ ಕ್ಲಿಕ್ ಮಾಡಿದರೆ, ತಮ್ಮ ಮೊಬೈಲ್‌ಗೆ ಬರುವ ಕೋಡ್ ಸೇರಿಸಿ submit ಬಟನ್ ಅದುಮಬೇಕು.


ಬಂಪರ್ ಆಫರ್ ನೀಡಿದ್ದ BSNL


BSNL ಕರೆಗಳು ಮತ್ತು SMS ಸಹಿತ ಒಂದು ವರ್ಷ ಅಥವಾ 365 ದಿನಗಳ ಸೇವೆಯನ್ನು ಈಗ ಎರಡು ತಿಂಗಳು ಅಂದರೆ 60 ದಿನಗಳ ಹೆಚ್ಚುವರಿ ಅವಧಿ ವಿಸ್ತರಣೆ ಮಾಡಿದೆ. BSNL ವೆಬ್‌ಸೈಟ್ ಪ್ರಕಾರ, ರೂ. 2,399 ರೀಚಾರ್ಜ್ ಪ್ಲಾನ್, ಈ ಹಿಂದೆ 365 ದಿನಗಳ ವ್ಯಾಲಿಡಿಟಿಯನ್ನು ನೀಡಿತ್ತು.



ಈಗ ಆಕರ್ಷಕ ಪ್ಲ್ಯಾನ್ ಪರಿಚಿಸಿದ್ದು, ಡೇಟಾ, ಸಂದೇಶ ಮತ್ತು ಕರೆ ಸೌಲಭ್ಯ ಸೇರಿ ರೂ. 2399/- ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಒಟ್ಟು 425 ದಿನಗಳ ಪ್ಯಾಕೇಜ್ ವ್ಯಾಲಿಡಿಟಿ ಪಡೆಯಬಹುದು.

2022ರ ಏಪ್ರಿಲ್ 1 ಮತ್ತು 2022ರ ಜೂನ್ 29 ರ ನಡುವೆ ವಾರ್ಷಿಕ ಯೋಜನೆಗೆ ರೀಚಾರ್ಜ್ ಮಾಡಿದ ಗ್ರಾಹಕರು ಈ ಸೌಲಭ್ಯ ಪಡೆಯಬಹುದು.

Ads on article

Advertise in articles 1

advertising articles 2

Advertise under the article