ಡೇಟಿಂಗ್ ಚಟಕ್ಕೆ ಬಲಿ ಬಿದ್ದ ಮ್ಯಾನೆಜರ್: 5.7 ಕೋಟಿ ಎಗರಿಸಿದ ಚಾಲಾಕಿ ಲೇಡಿ...!
ಡೇಟಿಂಗ್ ಚಟಕ್ಕೆ ಬಲಿ ಬಿದ್ದ ಮ್ಯಾನೆಜರ್: 5.7 ಕೋಟಿ ಎಗರಿಸಿದ ಚಾಲಾಕಿ ಲೇಡಿ...!
'ಡೇಟಿಂಗ್ ಆಪ್' ಮೂಲಕ ಪರಿಚಯ ಮಾಡಿಕೊಂಡ ಯುವತಿ ಬ್ಯಾಂಕ್ ಮ್ಯಾನೇಜರ್‌ಗೆ 5.7 ಕೋಟಿ ರೂ. ಪಂಗನಾಮ ಹಾಕಿದ್ದಾಳೆ.
ಬೆಂಗಳೂರು ನಗರದ ಇಂಡಿಯನ್ ಬ್ಯಾಂಕ್ ಹನುಮಂತನಗರ ಶಾಖೆಯ ಮ್ಯಾನೇಜರ್ ಹರಿಶಂಕರ್ ಪಂಗನಾಮ ಹಾಕಿಸಿಕೊಂಡ ವ್ಯಕ್ತಿ. ಆತ ಇತ್ತೀಚೆಗೆ ಡೇಟಿಂಗ್ ಆಪ್‌ನಲ್ಲಿ ಯುವತಿ ಪರಿಚಯ ಮಾಡಿಕೊಂಡಿದ್ದಾನೆ. ಆ ಬಳಿಕ, ಆಕೆಗೆ 5.7 ಕೋಟಿ ರೂಪಾಯಿ ಜಮೆ ಮಾಡಿ ಪೇಚಿಗೆ ಸಿಲುಕಿಕೊಂಡಿದ್ದಾರೆ. ಆತನನ್ನು ಬಂಧಿಸಲಾಗಿದೆ.
ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಆರೋಪಿ ಹರಿಶಂಕರ್ ವಿರುದ್ಧ ದೂರು ದಾಖಲಾಗಿದ್ದು, ಆರೋಪಿಗೆ 10 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ. ಹರಿಶಂಕರ್ ಸಹೋದ್ಯೋಗಿಗಳಾದ ಅಸಿಸ್ಟೆಂಟ್ ಬ್ರಾಂಚ್ ಮ್ಯಾನೇಜರ್ ಕೌಸಲ್ಯ ಜೆರಾಯಿ ಮತ್ತು ಕ್ಲರ್ಕ್ ಮುನಿರಾಜು ಅವರನ್ನೂ FIRನಲ್ಲಿ ಶಂಕಿತರು ಎಂದು ಹೆಸರಿಸಿದ್ದಾರೆ.
ಈ ಫ್ರಾಡ್ ಮೇ 13 ಮತ್ತು 19 ರ ನಡುವೆ ನಡೆದಿದೆ. ಡೇಟಿಂಗ್ ಆಪ್‌ನಲ್ಲಿ ಪರಿಚಯವಾದ ಯುವತಿಯಿಂದ ವಂಚನೆಗೆ ಒಳಗಾಗಿ ಅಷ್ಟೂ ಹಣವನ್ನು ಕಳೆದುಕೊಂಡಿದ್ದೇನೆ ಎಂದು ಬ್ಯಾಂಕ್ ಮ್ಯಾನೇಜರ್ ಪೊಲೀಸರಿಗೆ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದು, ಡೇಟಿಂಗ್ ಆಪ್‌ನಲ್ಲಿ ಪರಿಚಯವಾದ ಯುವತಿ ಸಲುಗೆ ಬೆಳೆಸಿಕೊಂಡು ಈ ಭಾರೀ ಮೊತ್ತವನ್ನು ಎಗರಿಸಿಕೊಂಡಿದ್ದಾಳೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಪೊಲೀಸ್ ತನಿಖೆ ಪ್ರಕಾರ, ಮಹಿಳಾ ಗ್ರಾಹಕರು ಅವರ ಹೆಸರಿನಲ್ಲಿ 1.3 ಕೋಟಿ ರೂಪಾಯಿಗಳನ್ನು ಸ್ಥಿರ ಠೇವಣಿ ಮಾಡಿದ್ದಾರೆ. ಅದರ ಆಧಾರ ಮೇಲೆ 75 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದರು. ಗ್ರಾಹಕರು ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದರು. ಆದರೆ ಆರೋಪಿ ದಾಖಲೆಯನ್ನು ತಿದ್ದಿ, ಹಲವು ಕಂತುಗಳಲ್ಲಿ 5.7 ರೂಪಾಯಿ ಪಡೆದಿದ್ದಾರೆ.
ಇಂಟರ್ನಲ್ ಎನ್‌ಕ್ವಯಿರಿ ಪ್ರಕಾರ ತನಿಖೆ ನಡೆಸಿದ ಬ್ಯಾಂಕ್, ಪಶ್ಚಿಮ ಬಂಗಾಳದ ಹಲವು ಬ್ಯಾಂಕ್‌ಗಳ 28 ಬ್ಯಾಂಕ್ ಖಾತೆಗಳಿಗೆ ಮತ್ತು ಕರ್ನಾಟಕದ ಎರಡು ಖಾತೆಗಳಿಗೆ 136 ವಹಿವಾಟುಗಳಲ್ಲಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಬಹಿರಂಗಪಡಿಸಿದೆ.