ವಿವಾಹವಾದರೂ ಪರ್ವಾಗಿಲ್ಲ ಈಗಲೂ ಈ ತೆಲುಗು ಸ್ಟಾರ್ ನಟನೊಂದಿಗೆ ಡೇಟಿಂಗ್ ಮಾಡುವೆ ಎಂದ ಮಾಜಿ ವಿಶ್ವ ಸುಂದರಿ
Saturday, June 4, 2022
ಹೈದರಾಬಾದ್: 2017ರಲ್ಲಿ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿರುವ ಹರಿಯಾಣದ ಸುಂದರಿ ಮಾನುಷಿ ಚಿಲ್ಲರ್ ಸಿನಿಮಾ ಕೆರಿಯರ್ ಹೇಳಿಕೊಳ್ಳುವಂತಹ ವೇಗವನ್ನು ಪಡೆಯಲಿಲ್ಲ. ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸುತ್ತಾರೆಂದು ಹೆಸರು ಕೇಳಿ ಬಂದರೂ ಸದ್ಯ ಅಧಿಕೃತವಾಗಿ ಸೆಟ್ಟೇರಿದ್ದು ಅಕ್ಷಯ್ ಕುಮಾರ್ ಜತೆಗಿನ ಪೃಥ್ವಿರಾಜ್ ಒಂದೇ. ಇದೀಗ ಪೃಥ್ವಿರಾಜ್ ಬಿಡುಗಡೆಗೆ ಸಿದ್ಧವಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗುತ್ತಿದೆ.
ಸಿನಿಮಾ ಬಿಡುಗಡೆಗೂ ಮುನ್ನ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ನಟಿ ಮಾನುಷಿ ಚಿಲ್ಲರ್ ಆಸಕ್ತಿದಾಯಕ ವಿಚಾರವೊಂದನ್ನು ಹೇಳಿದ್ದಾರೆ. ಆರ್ ಆರ್ ಆರ್ ಸಿನಿಮಾ ವೀಕ್ಷಣೆ ಬಳಿಕ ತಾನು ರಾಮ್ ಚರಣ್ ತೇಜ ಅವರ ಅಭಿಮಾನಿಯಾಗಿದ್ದೇನೆ. ಅವರೊಂದಿಗೆ ನಟಿಸಲು ಇಚ್ಛಿಸಿದ್ದೇನೆ. ಅವರಿಗೆ ವಿವಾಹವಾಗದಿದ್ದಲ್ಲಿ ನಾನೇ ಅವರ ಬಳಿಗೆ ಹೋಗಿ ಡೇಟಿಂಗ್ ಗೆ ಆಫರ್ ನೀಡುತ್ತಿದ್ದೆ. ಈಗಲೂ ಅವರು ಡೇಟಿಂಗ್ ಗೆ ಒಪ್ಪಿದ್ದಲ್ಲಿ ಅವರೊಂದಿಗೆ ಕುಳಿತು ಸಿನಿಮಾ ನೋಡಲು, ಜೊತೆಯಾಗಿ ತಿಂಡಿ-ತಿನಿಸು ತಿನ್ನುತ್ತಾ ಪರಸ್ಪರ ಮಾತುಕತೆ ನಡೆಸಲು ತಯಾರಿದ್ದೇನೆ ಎಂದು ಮಾನುಷಿ ಚಿಲ್ಲರ್ ಹೇಳಿಕೊಂಡಿದ್ದಾರೆ.
ಇದು ರಾಮ್ ಚರಣ್ ತೇಜ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಶೀಘ್ರದಲ್ಲೇ ನಿಮ್ಮಿಬ್ಬರು ಜೊತೆಯಾಗಿ ನಟಿಸುವ ಅವಕಾಶ ದೊರೆಯಲಿ ಎಂದು ಆಶಿಸಿದ್ದಾರೆ.