ಸಾಗರ: ಎತ್ತುಗಳಿಗೆ ನೀರು ಕೊಡಿಸಲೆಂದು ಹೋದ ಬಾಲಕ ತಿರುಗಿ ಬರಲೇ ಇಲ್ಲ
Sunday, June 5, 2022
ಸಾಗರ: ಎತ್ತುಗಳಿಗೆ ನೀರು ಕುಡಿಸಲೆಂದು ಹೋದ ಬಾಲಕ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸಾಗರ ಸಮೀಪದ ಹೊಸಂತೆ ಗ್ರಾಮದಲ್ಲಿ ನಡೆದಿದೆ.
ಸಾಗರ ಸಮೀಪದ ಹೊಸಂತೆ ಗ್ರಾಮದ ನಿವಾಸಿ ಸಂದೇಶ್(16) ಕೆರೆ ಪಾಲಾದ ಬಾಲಕ
ಈತ ಎತ್ತುಗಳಿಗೆ ನೀರುಕುಡಿಸಲೆಂದು ಕೆರೆಗೆ ತೆರಳಿದ್ದಾನೆ. ಈ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಇದೀಗ ಮೃತ ಬಾಲಕನ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ದೌಢಾಯಿಸಿ ಬಾಲಕನ ಮೃತದೇಹವನ್ನು ಮೇಲಕ್ಕೆತ್ತಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸಾಗರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.