![ಪುತ್ತೂರು: ಸಾಂಬಾರು ಪಾತ್ರೆಗೆ ಬಿದ್ದು ಬಿಸಿಯೂಟ ತಯಾರಕಿ ಮೃತ್ಯು ಪುತ್ತೂರು: ಸಾಂಬಾರು ಪಾತ್ರೆಗೆ ಬಿದ್ದು ಬಿಸಿಯೂಟ ತಯಾರಕಿ ಮೃತ್ಯು](https://blogger.googleusercontent.com/img/b/R29vZ2xl/AVvXsEgoa8UQN39D6FFioiIRZM0uQ6UMOr8zxgEmtw-t3iLl7TOnx5VvuL3LPMAGFw01sp57xUZzQzAYoOfOb7R-F03XxEh7_uRFR0-YI_n36NMC1KWTK9YBQHsutlgQybH9Ywf2VfMrIPMybzVN/s1600/1655264497634417-0.png)
ಪುತ್ತೂರು: ಸಾಂಬಾರು ಪಾತ್ರೆಗೆ ಬಿದ್ದು ಬಿಸಿಯೂಟ ತಯಾರಕಿ ಮೃತ್ಯು
Wednesday, June 15, 2022
ಪುತ್ತೂರು: ಬಿಸಿಯೂಟದ ಪಾತ್ರೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅಡುಗೆ ತಯಾರಕಿ ಮಹಿಳೆಯೋರ್ವರು ಮೃತಪಟ್ಟಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೈಂಟ್ ವಿಕ್ಟರ್ ಶಾಲೆಯ ಬಿಸಿಯೂಟ ತಯಾರಕಿ ಆ್ಯಗ್ನೆಸ್ ಪ್ರಮೀಳಾ ಡಿಸೋಜಾ (37) ಮೃತಪಟ್ಟ ಮಹಿಳೆ.
ಪ್ರಮೀಳಾ ಡಿಸೋಜಾ, ಪುತ್ತೂರಿನ ಕಸ್ಬಾ ಗ್ರಾಮದ ಸಂತ ವಿಕ್ಟರ್ ಶಾಲೆಯಲ್ಲಿ ಬಿಸಿಯೂಟ ತಯಾರಕಿಯಾಗಿ ಕೆಲಸ ಮಾಡುತ್ತಿದ್ದರು. ಮೇ 30ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಾಲೆಯ ಅಡುಗೆ ಮನೆಯ ಬಾಗಿಲ ಬಳಿ ಅಡಿಗೆ ತಯಾರು ಮಾಡಿ ಇಡಲಾಗಿತ್ತು. ಆದರೆ ಅವರು ಆಕಸ್ಮಿಕವಾಗಿ ಸಾಂಬಾರ್ ಪಾತ್ರೆಗೆ ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.