
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ!
Friday, June 24, 2022
ಮಂಗಳೂರು: ವರದಕ್ಷಿಣೆ ಕಿರುಕುಳವನ್ನು ತಾಳಲಾರದೆ ಗೃಹಿಣಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಕಾರಿಗನಹಳ್ಳಿಯಲ್ಲಿ ನಡೆದಿದೆ.
ಕಾರಿಗನಹಳ್ಳಿ ನಿವಾಸಿ ಮಧು ಎಂಬಾತನ ಪತ್ನಿ ಸಹನಾ (35) ಮೃತಪಟ್ಟ ದುರ್ದೈವಿ. ಪತಿ ಮನೆಯವರ ವರದಕ್ಷಿಣೆ ಕಿರುಕುಳದಿಂದ ಸಹನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಮಧು ಮೃತಪಟ್ಟದ್ದರಿಂದ ರೊಚ್ಚಿಗೆದ್ದ ಆಕೆಯ ಮನೆಯವರು ಮಧು ಮನೆಯ ಕಾರನ್ನು ಜಜ್ಜಿ ಜಖಂಗೊಳಿಸಿದ್ದಾರೆ.
ಇದೀಗ ಮಧು ಹಾಗೂ ಆತನ ಮನೆಯವರು ಪರಾರಿಯಾಗಿದ್ದಾರೆ. ಸಹನಾ ಕುಟುಂಬದವರು ನೀಡಿರುವ ದೂರನ್ನು ದಾಖಲಿಸಿಕೊಂಡ ಕಿಕ್ಕೇರಿ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.