ವೀಕ್ ಎಂಡ್ ರೈಡ್ ಗೆ ಹೋಗಿದ್ದ ಟೆಕ್ಕಿ ಮೇಲ್ಸೇತುವೆಯಿಂದ ಬಿದ್ದು ಮೃತ್ಯು
Sunday, June 26, 2022
ಕುಣಿಗಲ್: ವೀಕ್ ಎಂಡ್ ಜಾಲಿ ರೈಡ್ ಗೆಂದು ಬೈಕ್ ನಲ್ಲಿ ಸಂಚಾರ ಹೊರಟಿದ್ದ ಟೆಕ್ಕಿ ಮೇಲ್ಸೇತುವೆ ಮೇಲಿನಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕುಣಿಗಲ್ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಗವಿಮಠ ಬಳಿ ನಡೆದಿದೆ.
ಬೆಂಗಳೂರು ಬನಶಂಕರಿಯ 2ನೇ ಹಂತದ ನಿವಾಸಿ ಸಾಫ್ಟ್‌ವೇರ್ ಇಂಜಿನಿಯರ್ ಸೂರಜ್ (27) ಮೃತಪಟ್ಟ ದುರ್ದೈವಿ.
ಬೆಂಗಳೂರಿನ ಇನ್ಫೋಸಿಸ್ ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸೂರಜ್ ವೃತ್ತಿ ನಿರ್ವಹಿಸುತ್ತಿದ್ದರು. ವೀಕ್ ಎಂಡ್ ಹಿನ್ನೆಲೆಯಲ್ಲಿ ತಮ್ಮ ಐಷಾರಾಮಿ ಬೈಕ್ ಏರಿ ಯಡಿಯೂರು ಬಳಿಯಿರುವ ಧ್ರುವತಾರೆ ಹೊಟೇಲ್ ಗೆ ಹೊಗುತ್ತಿದ್ದರು. ಆದರೆ ಗವಿಮಠದ ಬಳಿ ಟಿಟಿ ವಾಹನಕ್ಕೆ ಇವರ ಬೈಕ್ ಢಿಕ್ಕಿ ಹೊಡೆದಿದೆ. ಪರಿಣಾಮ ಮೇಲ್ಸೇತುವೆಯಿಂದ ಸೂರಜ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.