-->
ಅಮೆಜಾನ್, ಗೂಗಲ್, ಫೇಸ್​ಬುಕ್ ನಿಂದ ಕೆಲಸದ ಆಫರ್ ಪಡೆದ ವಿದ್ಯಾರ್ಥಿ: ಫೇಸ್​ಬುಕ್ ಉದ್ಯೋಗ ನೆಚ್ಚಿದ ಈತನ ವಾರ್ಷಿಕ ಸಂಬಳ ಕೇಳಿದ್ರೆ ಹುಬ್ಬೇರಿಸ್ತೀರಾ!

ಅಮೆಜಾನ್, ಗೂಗಲ್, ಫೇಸ್​ಬುಕ್ ನಿಂದ ಕೆಲಸದ ಆಫರ್ ಪಡೆದ ವಿದ್ಯಾರ್ಥಿ: ಫೇಸ್​ಬುಕ್ ಉದ್ಯೋಗ ನೆಚ್ಚಿದ ಈತನ ವಾರ್ಷಿಕ ಸಂಬಳ ಕೇಳಿದ್ರೆ ಹುಬ್ಬೇರಿಸ್ತೀರಾ!

ನವದಹಲಿ: ಒಂದೊಳ್ಳೆ ಕೆಲಸ ದೊರಕಿದರೆ ಸಾಕೆಂದು ಎಲ್ಲರೂ ಅಂದ್ಕೊಡಿರುತ್ತಾರೆ. ಆದರೆ ಮೂರು ಮೂರು ಕೆಲಸಗಳು ಒಟ್ಟೊಟ್ಟಿಗೆ ಮೂರು ಕೆಲಸ ದೊರಕಿಬಿಟ್ಟರೆ ಸ್ವರ್ಗಕ್ಕೆ ಮೂರೇ ಗೇಣು ಅಂದ್ಕೊಂಳ್ಳಬಹುದು. 

ಇಂಥಹದ್ದೇ ಅದೃಷ್ಟವೊಂದು ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿಗೆ ಒಲಿದು ಬಂದಿದೆ. ಹೌದು. ಕೋಲ್ಕತ್ತದ ಜಾದವ್​ಪುರ್​ ವಿವಿ ವಿದ್ಯಾರ್ಥಿ ಬಿಸಾಖ್​ ಮೊಂಡಲ್ ಗೆ ಸಾಮಾಜಿಕ ಜಾಲತಾಣ ದೈತ್ಯ ಕಂಪೆನಿ ಫೇಸ್​ಬುಕ್​ನಲ್ಲಿ ಕೆಲಸ ದೊರಕಿದೆ. ವಾರ್ಷಿಕವಾಗಿ 1.8 ಕೋಟಿ ರೂ. ಸಂಬಳ. ಇದು ಈ ವರ್ಷದಲ್ಲೇ ಫೇಸ್​ಬುಕ್ ಸಂಸ್ಥೆ ವಿದ್ಯಾರ್ಥಿಯೊಬ್ಬನಿಗೆ ಆಫರ್​ ಮಾಡಿರುವ ಅತಿ ದೊಡ್ಡ ಸ್ಯಾಲರಿ ಪ್ಯಾಕೇಜ್​ ಆಗಿದೆ. 

ಈತನಿಗೆ ಫೇಸ್​ಬುಕ್​ ಮಾತ್ರವಲ್ಲ, ಗೂಗಲ್​ ಮತ್ತು ಅಮೆಜಾನ್​ನಿಂದಲೂ ಉದ್ಯೋಗದ ಆಫರ್​ ಬಂದಿತ್ತು. ಆದರೆ, ಅವೆರಡನ್ನೂ ಬದಿಗಿಟ್ಟು ಬಿಸಾಖ್​ ಮೊಂಡಲ್ ಫೇಸ್​ಬುಕ್​ ಆಫರ್​ ಅನ್ನು ಒಪ್ಪಿಕೊಂಡಿದ್ದಾರೆ. ಏಕೆಂದರೆ, ಗೂಗಲ್​ ಹಾಗೂ ಅಮೆಜಾನ್​​ಗೆ ಹೋಲಿಸಿದರೆ ಫೇಸ್​ಬುಕ್​ ಸ್ಯಾಲರಿ ಪ್ಯಾಕೇಜ್​ ಹೆಚ್ಚಾಗಿರುವ ಕಾರಣ ಬಿಸಾಕ್​ ಈ ಆಫರ್ ಅನ್ನು ಒಪ್ಪಿಕೊಂಡಿದ್ದಾರಂತೆ. 

ಸೆಪ್ಟೆಂಬರ್​ ತಿಂಗಳಲ್ಲಿ ಫೇಸ್​ಬುಕ್​ಗೆ ಸೇರಲಿದ್ದಾರೆ. ಅಂದಹಾಗೆ ಬಿಸಾಕ್​, ಕಂಪ್ಯೂಟರ್​​ ಸೈನ್ಸ್​ ಮತ್ತು ಇಂಜಿನಿಯರಿಂಗ್​ ವಿಭಾಗದ ನಾಲ್ಕನೇ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಮಂಗಳವಾರ ರಾತ್ರಿ ಅವರಿಗೆ ಕೆಲಸದ ಆಫರ್​ ಸಿಕ್ಕಿದೆ. ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಹಲವಾರು ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಹಾಗೂ ತನ್ನ ಪಠ್ಯಕ್ರಮದ ಅಧ್ಯಯನದ ಹೊರತಾಗಿ ಜ್ಞಾನವನ್ನು ಸಂಪಾದಿಸಲು ನನಗೆ ಅವಕಾಶ ಸಿಕ್ಕಿತು. ಇದರ ನೆರವಿನಿಂದ ನಾನು ಅನೇಕ ಸಂದರ್ಶನಗಳನ್ನು ಸುಲಭವಾಗಿ ಎದುರಿಸಿದೆ ಎಂದು ಬಿಸಾಕ್​ ಹೇಳಿಕೊಂಡಿದ್ದಾರೆ.

ಬಿಸಾಖ್​ ಮೊಂಡಲ್ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಸಾಧಾರಣ ಕುಟುಂಬದಿಂದ ಬಂದವರು. ಅವರ ತಾಯಿ ಅಂಗನವಾಡಿ ಕಾರ್ಯಕರ್ತೆ. ಮಾಧ್ಯಮ ವರದಿಗಳ ಪ್ರಕಾರ ಜಾದವ್​ಪುರ್​ ವಿಶ್ವವಿದ್ಯಾನಿಲಯದ ಸುಮಾರು 9 ವಿದ್ಯಾರ್ಥಿಗಳು ಕಳೆದ ವರ್ಷ ಸಾಗರೋತ್ತರ ಕಂಪೆನಿಗಳಿಂದ 1 ಕೋಟಿ ರೂ‌.ಗೂ ಅಧಿಕ ವಾರ್ಷಿಕ ಪ್ಯಾಕೇಜ್‌ಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Ads on article

Advertise in articles 1

advertising articles 2

Advertise under the article