ಚಲಿಸುತ್ತಿರುವಾಗಲೇ ದ್ವಿಚಕ್ರ ವಾಹನ ಅಗ್ನಿಗಾಹುತಿ: ಸವಾರರಿಬ್ಬರು ಗಂಭೀರ
Saturday, June 25, 2022
ಮಂಡ್ಯ: ಚಲಿಸುತ್ತಿರುವಾಗಲೇ ದ್ವಿಚಕ್ರ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆಯೊಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ದರಸಗುಪ್ಪೆ ಬಳಿ ನಡೆದಿದೆ.
ಸುಟ್ಟಗಾಯಗಳಿಂದ ಗಂಭೀರಗೊಂಡಿದ್ದ ಮೈಸೂರು ಜಿಲ್ಲೆಯ ಶಿವರಾಮಯ್ಯ ಹಾಗೂ ಅನಂತರಾಮು ಎಂಬವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಬ್ಬರಿಗೂ ವಾಹನದಿಂದ ಇಳಿಯಲೂ ಅವಕಾಶವಿಲ್ಲದಂತೆ ಬೆಂಕಿ ಹತ್ತಿಕೊಂಡಿದೆ. ಪರಿಣಾಮ ಇಬ್ಬರೂ ಸುಟ್ಟಗಾಯಗಳಿಂದ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದರು. ತಕ್ಷಣ ಸ್ಥಳೀಯರು ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.