-->
fraud in the name of financial company- ಮಂಗಳೂರು: ಫೈನಾನ್ಸ್‌ ಹೆಸರಲ್ಲಿ ವಂಚನೆ

fraud in the name of financial company- ಮಂಗಳೂರು: ಫೈನಾನ್ಸ್‌ ಹೆಸರಲ್ಲಿ ವಂಚನೆ

ಮಂಗಳೂರು: ಫೈನಾನ್ಸ್‌ ಹೆಸರಲ್ಲಿ ವಂಚನೆ






ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುವುದಕ್ಕೆ ಮುಂದಾಗಿದ್ದ ವ್ಯಕ್ತಿಯೊಬ್ಬರಿಗೆ ಫೈನಾನ್ಸ್ ಸಂಸ್ಥೆಯ ಹೆಸರಿನಲ್ಲಿ ಕರೆ ಮಾಡಿ 18,119 ರೂ. ವಂಚಿಸಿದ ಪ್ರಕರಣ ಮಂಗಳೂರಿನಲ್ಲಿ ವರದಿಯಾಗಿದೆ.



ಕಳೆದ ಮೇ 25ರಂದು ಅನಾಮಧೇಯ ವ್ಯಕ್ತಿಯೊಬ್ಬರಿಂದ ಈ ಕರೆ ಬಂದಿದ್ದು, ಸಾಲ ಮಂಜೂರು ಮಾಡಲು ಗ್ರಾಹಕರ ವಿವರ (ಕೆವೈಸಿ) ಕಳುಹಿಸುವಂತೆ ತಿಳಿಸಿದ್ದಾರೆ.



ಈ ಮಾತನ್ನು ನಂಬಿದ ವ್ಯಕ್ತಿ ಕೆವೈಸಿ ಕಳುಹಿಸಿದ್ದಾರೆ. ಆ ಬಳಿಕ ಇನ್ನೊಂದು ಕರೆ ಬಂದಿದೆ. 


ಈ ಕರೆಯಲ್ಲಿ "ನಿಮಗೆ ಸಾಲ ಮಂಜೂರಾಗಿದೆ. ಅದರ ಮಾಹಿತಿಯನ್ನು ವಾಟ್ಸಾಪ್ ಮಾಡಲಾಗಿದೆ. ಅದಕ್ಕಾಗಿ ಅಗ್ರಿಮೆಂಟ್‌ ಚಾರ್ಜಸ್‌, ಲೋನ್‌ ಪೇಮೆಂಟ್‌ ಹೋಲ್ಡ್‌ ಚಾರ್ಜಸ್‌ಅನ್ನು ಗೂಗಲ್‌ ಪೇ ಮಾಡಿ" ಎಂದು ತಿಳಿಸಿದ್ದಾರೆ.



ಇದನ್ನು ನಿಜ ಎಂದು ನಂಬಿದ ದೂರುದಾರರು , ತನ್ನ ಬ್ಯಾಂಕ್‌ ಖಾತೆಯಿಂದ ಹಂತ ಹಂತವಾಗಿ 18,119 ರೂ. ಹಣ ವರ್ಗಾವಣೆ ಮಾಡಿದ್ದಾರೆ.



ಅಪರಿಚಿತ ವ್ಯಕ್ತಿಗಳು ಲೋನ್‌ ಹಾಗೂ ತಾನು ವರ್ಗಾಯಿಸಿದ ಹಣವನ್ನು ಹಿಂತಿರುಗಿಸದೆ ಮೋಸ ಮಾಡಿದ್ದಾರೆ. ಈ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Ads on article

Advertise in articles 1

advertising articles 2

Advertise under the article