-->
ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ನೀಡಿದ HDFC: ಕಾರಣ ಏನು ಗೊತ್ತೇ..?

ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ನೀಡಿದ HDFC: ಕಾರಣ ಏನು ಗೊತ್ತೇ..?

ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ನೀಡಿದ HDFC: ಕಾರಣ ಏನು ಗೊತ್ತೇ..?





ದೇಶದ ಮುಂಚೂಣಿ ಖಾಸಗಿ ಬ್ಯಾಂಕ್ ಆದ HDFC ಬ್ಯಾಂಕ್ ತನ್ನ ಎಂಸಿಎಲ್‌ಆರ್ ಅನ್ನು ಮತ್ತೆ ಏರಿಕೆ ಮಾಡಿದೆ. ಈ ಬಗ್ಗೆ ತನ್ನ ವೆಬ್‌ಸೈಟ್‌ನಲ್ಲಿ ಬ್ಯಾಂಕ್ ಮಾಹಿತಿ ನೀಡಿದೆ. ಇದರಿಂದಾಗಿ HDFC ಬ್ಯಾಂಕ್‌ನಿಂದ ಕಾರು ಹಾಗೂ ಗೃಹ ಸಾಲ ಪಡೆದವರಿಗೆ ಹೊರೆಯು ಅಧಿಕವಾಗಲಿದೆ.



RBIನ ಹಣಕಾಸು ನೀತಿ ಸಮಿತಿ ಸಭೆಯ ಮೇಲೆ ಸದ್ಯ ಎಲ್ಲರ ಚಿತ್ತ ನೆಟ್ಟಿದೆ. ಈ ಸಭೆ ಬಳಿಕ RBI ತನ್ನ ರೆಪೋ ದರವನ್ನು ಏರಿಸುವ ಸುಳಿವು ನೀಡಿದೆ. ಅದಕ್ಕೂ ಮುನ್ನ HDFC ಸಾಲದ ದರವನ್ನು 35 ಮೂಲಾಂಕ ಏರಿಕೆ ಮಾಡಿದೆ.


Repo Rate ಹೆಚ್ಚಳಕ್ಕೆ RBI ಸಜ್ಜು: ಹೊರೆಯಾದ EMI


HDFC ತನ್ನ MCLR ಏರಿಕೆ ಮಾಡಿದ ಕಾರಣದಿಂದಾಗಿ ಈ ಬ್ಯಾಂಕ್‌ನಿಂದ ಗೃಹ ಸಾಲ ಹಾಗೂ ಕಾರು ಖರೀದಿ ಸಾಲ ಪಡೆದವರಿಗೆ ಹೊರೆಯು ಅಧಿಕವಾಗಲಿದೆ. ಈಗಾಗಲೇ ಈ ಬ್ಯಾಂಕ್‌ನ ಗ್ರಾಹಕರಿಗೆ EMI ಹೆಚ್ಚಾಗಿದೆ. ಈ ಹಿಂದೆ HDFC ಸಾಲದ ಬಡ್ಡಿದರ ಹೆಚ್ಚಿಸಿದೆ.

ಸಾಲದ ಬಡ್ಡಿದರ ಹೆಚ್ಚಿಸಿದ್ದ HDFC

RBI ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಸಾಮಾನ್ಯವಾಗಿಯೇ ಬ್ಯಾಂಕುಗಳು ಸಾಲದ ಬಡ್ಡಿದರವನ್ನು, FD ಮೇಲಿನ ಬಡ್ಡಿದರವನ್ನು ಏರಿಕೆ ಮಾಡುತ್ತದೆ.

ಕಳೆದ ಬಾರಿ RBI ರೆಪೋ ದರವನ್ನು ಏರಿಕೆ ಮಾಡಿದ ಹಿನ್ನೆಲೆ ಮೇ ತಿಂಗಳಲ್ಲಿಯೇ ಹಲವಾರು ಬ್ಯಾಂಕುಗಳು ತಮ್ಮ ಸಾಲ ಮತ್ತು ಠೇವಣಿ ದರಗಳನ್ನು ಹೆಚ್ಚಳ ಮಾಡಿದೆ. ಮೇ 7ರಂದು HDFC ಬ್ಯಾಂಕ್ MCLR ಅನ್ನು 25 ಮೂಲಾಂಕ ಏರಿಕೆ ಮಾಡಿದೆ.

ನೂರು ಮೂಲಾಂಕ ಎಂದರೆ ಒಂದು ಶೇಕಡವಾಗಿದೆ. ಆದ್ದರಿಂದ HDFC ಇತ್ತೀಚೆಗೆ ಸಾಲದ ದರವನ್ನು ಏರಿಕೆ ಮಾಡಿದ ಬಳಿಕ EMI ಹೊರೆಯು ಶೇಕಡ 0.35 ಹೆಚ್ಚಾಗಿದೆ.


ಸಾಲದ ನೂತನ ಬಡ್ಡಿದರವೆಷ್ಟು?

ಒಂದು ರಾತ್ರಿಯ ಅವಧಿ: ಈ ಹಿಂದಿನ ದರ ಶೇ. 7.15, ಹೊಸ ದರ ಶೇ. 7.50

ಒಂದು ತಿಂಗಳ ಅವಧಿ: ಈ ಹಿಂದಿನ ದರ ಶೇ. 7.20, ಹೊಸ ದರ ಶೇ. 7.55

ಮೂರು ತಿಂಗಳ ಅವಧಿ: ಈ ಹಿಂದಿನ ದರ ಶೇ. 7.25, ಹೊಸ ದರ ಶೇ. 7.60

ಆರು ತಿಂಗಳ ಅವಧಿ: ಈ ಹಿಂದಿನ ದರ ಶೇ. 7.35, ಹೊಸ ದರ ಶೇ. 7.70

ಒಂದು ವರ್ಷದ ಅವಧಿ: ಈ ಹಿಂದಿನ ದರ ಶೇ. 7.50, ಹೊಸ ದರ ಶೇ. 7.85

ಎರಡು ವರ್ಷದ ಅವಧಿ: ಈ ಹಿಂದಿನ ದರ ಶೇ. 7.60, ಹೊಸ ದರ ಶೇ. 7.95

ಮೂರು ವರ್ಷದ ಅವಧಿ: ಈ ಹಿಂದಿನ ದರ ಶೇ. 7.70, ಹೊಸ ದರ ಶೇ. 8.05


ಕಾರು, ಗೃಹ ಸಾಲ EMI ಏರಿಕೆ?

HDFC ಬ್ಯಾಂಕ್ ತನ್ನ ಎಂಸಿಎಲ್‌ಆರ್ ದರವನ್ನು ಏರಿಕೆ ಮಾಡಿದ ಕಾರಣದಿಂದಾಗಿ ಗೃಹ, ವಾಹನ ಹಾಗೂ ವೈಯಕ್ತಿಕ ಸಾಲದ ಇಎಂಐ ಹೊರೆಯು ಇನ್ನಷ್ಟು ಹೆಚ್ಚಳವಾಗಲಿದೆ. ಈಗಾಗಲೇ ಸಾಲ ಪಡೆದಿರುವವರ ಸಾಲದ ಮರುಹೊಂದಿಸುವಿಕೆ ದಿನಾಂಕ (reset date) ಬಂದಾಗ ಮಾತ್ರ ಪರಿಷ್ಕರಣೆ ಮಾಡಲಾಗುತ್ತದೆ. ಇದರರ್ಥ ಒಬ್ಬ ವ್ಯಕ್ತಿಯ ಗೃಹ ಸಾಲವು MCLR ಅನ್ನು ಆಧರಿಸಿದ್ದರೆ ಮರುಹೊಂದಿಸುವ ದಿನಾಂಕವು ಸೆಪ್ಟೆಂಬರ್‌ನಲ್ಲಿದ್ದರೆ, ಸೆಪ್ಟೆಂಬರ್‌ನಿಂದ ಹೆಚ್ಚಿನ ಇಎಂಐ ಪಾವತಿ ಮಾಡಬೇಕಾಗುತ್ತದೆ. ಅಲ್ಲಿಯವರೆಗೆ ಅಸ್ತಿತ್ವದಲ್ಲಿರುವ ದರವನ್ನು ಪಾವತಿ ಮಾಡಬೇಕಾಗುತ್ತದೆ.



Repo Rate ಹೆಚ್ಚಳಕ್ಕೆ RBI ಸಜ್ಜು

ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಈಗಾಗಲೇ RBI ರೆಪೋ ದರವನ್ನು ಏರಿಕೆ ಮಾಡಿದೆ. ಈಗ ಮತ್ತೆ ರೆಪೋ ದರವನ್ನು ಹೆಚ್ಚಳ ಮಾಡುವ RBI ಸಿದ್ದತೆ ಮಾಡಿಕೊಂಡಿದೆ.

ಹಿಂದೆಯೇ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ವಾರ ಕಳೆಯುತ್ತಿದ್ದಂತೆ ಬ್ಯಾಂಕ್‌ಗಳು ಆರ್‌ಬಿಐನ ನಿರೀಕ್ಷಿತ ದರ ಏರಿಕೆಯ ಹೊರೆಯನ್ನು ಜನರು ಮೇಲೆ ಹಾಕಿದೆ. ಇದರಿಂದಾಗಿ ಸಾಲಗಳ ಮೇಲಿನ ಮಾಸಿಕ ಇಎಂಐ ಕಂತು ಏರಿಕೆಯಾಗಿದೆ.

ಈಗಾಗಲೆ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಮೇಲೆ ಬರೆ ಎಳೆದಂತೆ ಆಗಿದೆ. ಹಣದುಬ್ಬರ ಮತ್ತಷ್ಟು ಏರಿಕೆ ಹೊಂದುತ್ತಿರುವ ನಡುವೆ RBI ಮತ್ತೆ ರೆಪೋ ದರವನ್ನು ಹೆಚ್ಚಳ ಮಾಡಲು ಸಿದ್ಧವಾಗಿದೆ.

Ads on article

Advertise in articles 1

advertising articles 2

Advertise under the article