Money Tips- ನಿಮಗೆ ಸಾಲ ಬೇಕಾ?- ಸಿಬಿಲ್ ದರ ತಪ್ಪದೆ ಪರಿಶೀಲಿಸಿ... ಸಿಬಿಲ್ ಸ್ಕೋರ್ ಹೆಚ್ಚಿಸುವುದು ಹೇಗೆ?
ನಿಮಗೆ ಸಾಲ ಬೇಕಾ?- ಸಿಬಿಲ್ ದರ ತಪ್ಪದೆ ಪರಿಶೀಲಿಸಿ... ಸಿಬಿಲ್ ಸ್ಕೋರ್ ಹೆಚ್ಚಿಸುವುದು ಹೇಗೆ?
ಸಿಬಿಲ್ ಈಗ ಎಲ್ಲರಿಗೂ ಗೊತ್ತಿರುವ ವಿಷಯ. ಯಾವುದೆ ಸಾಲವನ್ನು ಪಡೆಯುವ ಮುನ್ನ ಬ್ಯಾಂಕರ್ ನಿಮ್ಮ ಸಿಬಿಲ್ ಕ್ರೆಡಿಟ್ ಸ್ಕೋರ್ ಪರೀಕ್ಷಿಸುತ್ತಾರೆ. Cibil ಕ್ರೆಡಿಟ್ ಸ್ಕೋರ್ ಉತ್ತಮ ಇದ್ದರೆ ನಿಮಗೆ ಸುಲಭವಾಗಿ ಸಾಲ ದೊರೆಯುತ್ತದೆ.
ಸಿಬಿಲ್ ಸ್ಕೋರ್ ಎಂದರೇನು...? ಯಾರು ಅದನ್ನು ನೀಡುವುದು... ಆ ಸ್ಕೋರ್‌ನ್ನು ಹೆಚ್ಚಿಸಲು ಏನು ಮಾಡಬೇಕು ಗೊತ್ತೇ..?
ಇಲ್ಲಿದೆ ಈ ಕುರಿತ ಸರಳ ಸಿಂಪಲ್ ಮಾಹಿತಿ...
'ಕ್ರೆಡಿಟ್ ಇನ್ಫರ್ಮೆಷನ್ ಬ್ಯೂರೋ ಇಂಡಿಯಾ ಲಿ. (ಸಿಬಿಲ್) ಸಾಲದ ಬಗ್ಗೆ ಮಾಹಿತಿ ನೀಡುವ ದೇಶದ ಮೊದಲ ಕಂಪನಿ. ಯಾವುದೇ ವ್ಯಕ್ತಿಗಳು, ವ್ಯವಹಾರಿಕ ಸಂಸ್ಥೆಗಳ ಸಾಲದ ದಾಖಲೆಗಳನ್ನು ಸಂಗ್ರಹಿಸಿ ನಿರ್ವಹಿಸುವುದು ಈ ಕಂಪೆನಿಯ ಮೂಲ ಧ್ಯೇಯ.
ಸಾಮಾನ್ಯವಾಗಿ ಸಿಬಿಲ್ ಸ್ಕೋರ್ ಮೂರಂಕೆಯಿಂದ ಕೂಡಿರುತ್ತದೆ. ಬಹುತೇಕ ಅದು 300ರಿಂದ 900ರ ಮಧ್ಯದಲ್ಲಿ ಇರುತ್ತದೆ. 300 ಅಂದರೆ ತೀರಾ ನಿಕೃಷ್ಟ ಸಿಬಿಲ್ ಸ್ಕೋರ್... 900 ಅಂದರೆ ಅತ್ಯದ್ಭುತ ಸ್ಕೋರ್.
ಇನ್ನು, ನಿಮ್ಮ ಸಿಬಿಲ್ ಸ್ಕೋರ್ 690ರ ಮೇಲೆ ಇದ್ದರೆ ಆರ್ಥಿಕವಾಗಿ ಸಮರ್ಥರು ಎಂದರ್ಥ. 700ರ ಮೇಲಿದ್ದರೆ ಸಾಲ ಮರುಪಾವತಿಗೆ ನೀವು ಸಬಲರು ಎಂದರ್ಥ.
ಸಾಲ ನೀಡುವ ಎಲ್ಲ ಬ್ಯಾಂಕುಗಳು ಮತ್ತು ಸಾಲ ಸಂಸ್ಥೆಗಳು ಸಿಬಿಲ್‌ಗೆ ಸಾಲದ ಅಂಕಿ ಅಂಶಗಳನ್ನು ನೀಡುತ್ತಾ ಬರುತ್ತವೆ. ಸಾಲ ನೀಡಿಕೆಯಿಂದ ಹಿಡಿದು, ಕಂತು ಮರುಪಾವತಿ ವರೆಗೆ ಇಂಚಿಂಚು ವರದಿಯನ್ನು ಅವು ನೀಡುತ್ತವೆ.
ಈ ಆಧಾರದಲ್ಲಿ, ವ್ಯಕ್ತಿ ಮತ್ತು ಸಂಸ್ಥೆಯ ಸಿಬಿಲ್ ಸ್ಕೋರ್ ಮೌಲ್ಯ ಮಾಪನ ಮಾಡಲಾಗುತ್ತದೆ. ಅದನ್ನು ಆಧರಿಸಿಯೇ ಬ್ಯಾಂಕ್‌ಗಳು ಗ್ರಾಹಕರಿಗೆ ಸಾಲ ಕೊಡಲು ತೀರ್ಮಾನಿಸುತ್ತವೆ.
ಇನ್ನು ಸಾಲ ಪಡೆಯಬೇಕಿದ್ದರೆ, ಸಿಬಿಲ್ ಸ್ಕೋರ್ ಅತಿ ಮುಖ್ಯ. ನಿಮ್ಮ ಸ್ಕೋರ್ ಸೂಪರ್ ಆಗಿದ್ದಷ್ಟು ನಿಮಗೆ ಬ್ಯಾಂಕ್, ಫೈನಾನ್ಸ್ ಸಂಸ್ಥೆಯಿಂದ ಸಾಲ ಖಾತ್ರಿ.
ಸಿಬಿಲ್ ಸ್ಕೋರ್ ಉತ್ತಮ ಪಡಿಸುವುದು ಹೇಗೆ..?
ನಿಮ್ಮ ಸಿಬಿಲ್ ಸ್ಕೋರ್ ಒಮ್ಮೆ ಪರಿಶೀಲಿಸಿ. ಮೊಬೈಲ್‌ನಲ್ಲಿ ಸಿಬಿಲ್ ಆಪ್ ಡೌನ್‌ಲೋಡ್ ಮಾಡಿದರೆ ಮೊದಲ ಸಿಬಿಲ್ ಸ್ಕೋರ್ ಉಚಿತವಾಗಿ ಸಿಗುತ್ತದೆ.
ಪ್ರತಿ ತಿಂಗಳೂ ಅದನ್ನು ಸಿಬಿಲ್ ಅಪ್‌ಡೇಟ್ ಮಾಡುತ್ತದೆ. ನಿಮ್ಮ ಸಿಬಲ್ ಸ್ಕೋರ್ ಕೆಟ್ಟದ್ದಾಗಿದ್ದರೆ ಚಿಂತಿಸದಿರಿ... ಅದನ್ನು ಉತ್ತಮ ಪಡಿಸಬಹುದು.
ಹೇಗೆ ಗೊತ್ತೇ..?
ಪ್ರತಿ ತಿಂಗಳು ಕಟ್ಟುವ ಕಂತನ್ನು ಸರಿಯಾಗಿ ಪಾವತಿಸುವಂತೆ ನೋಡಿಕೊಳ್ಳಿ. ಕ್ರೆಡಿಟ್ ಕಾರ್ಡ್ ಪಾವತಿಯನ್ನು ನಿಯಮಿತವಾಗಿ ಪಾವತಿಸಿ, ಅದು ಬಾಕಿ ಇರದಂತೆ ನೋಡಿಕೊಳ್ಳಿ. ತಲೆ ನೋವಾಗಿರುವ ಕೆಲವು ಸಾಲಗಳನ್ನು ಮುಗಿಸಿ. ಇಎಂಐ ಬಾಕಿ ಇರದಂತೆ ನೋಡಿಕೊಳ್ಳಿ. ಇಸಿಎಸ್ ಬೌನ್ಸ್ ಆಗದಂತೆ ಎಚ್ಚರಿಕೆಯಿಂದ ಬ್ಯಾಂಕ್ ಬ್ಯಾಲೆನ್ಸ್ ಕಾಪಾಡಿಕೊಳ್ಳಿ.
ಈ ಎಲ್ಲ ಅಂಶಗಳನ್ನು ಸರಿಯಾಗಿ ಪಾಲಿಸಿದರೆ ನಿಮಗೆ ಉತ್ತಮ ಸಿಬಿಲ್ ರೇಟಿಂಗ್ ಒಲಿಯುತ್ತದೆ.