ಬಾಲಿವುಡ್ ಸ್ಟಾರ್ ಗಳಿಂದ IIFA ಅವಾರ್ಡ್ ಸಮಾರಂಭದಲ್ಲಿ ಕೇಳಿ ಬಂದ 'ತುಳು ಮಸ್ತ್ ಮೋಕೆ ಮಾರಾಯ್ರೆ, ನಮಸ್ಕಾರ, ಸೌಖ್ಯನಾ' ಎಂಬ ತುಳುವಿನಲ್ಲಿ ಮಾತು
Sunday, June 5, 2022
ಮಂಗಳೂರು: ಬಾಲಿವುಡ್ ನಲ್ಲಿ ಸಾಕಷ್ಟು ತಾರೆಯರು ಕರಾವಳಿ ಮೂಲದದವರಿದ್ದಾರೆ. ಇವರೆಲ್ಲರೂ ತಮ್ಮ ಮನೆಮಾತು ತುಳುವನ್ನು ಮರೆತಿಲ್ಲ. ಇದೀಗ ಬಾಲಿವುಡ್ ಸ್ಟಾರ್ ಗಳಾದ ಸುನಿಲ್ ಶೆಟ್ಟಿ, ಐಶ್ವರ್ಯಾ ರೈ ಮೊನ್ನೆ ಅಬುಧಾಬಿಯಲ್ಲಿ ನಡೆದ IIFA ಅವಾರ್ಡ್ ಸಮಾರಂಭದಲ್ಲಿ ತುಳುವಿನಲ್ಲಿ ಮಾತನಾಡಿ ತಮ್ಮ ಭಾಷಾ ಅಭಿಮಾನ ಮೆರೆದಿದ್ದಾರೆ.
ಸುನಿಲ್ ಶೆಟ್ಟಿ ಮತ್ತು ಐಶ್ವರ್ಯಾ ರೈಯವರನ್ನು ಮಂಗಳೂರಿನ ಆರ್ ಜೆ ಎರೊಲ್ ಅವರು ಮಾತಿಗೆಳೆದಿದ್ದಾರೆ. ಆಗ ಅವರಿಬ್ಬರಲ್ಲಿ ತುಳುವಿನಲ್ಲಿ ಮಾತನಾಡಲು ಹೇಳಿದ್ದಾರೆ. ಆಗ ಸುನಿಲ್ ಶೆಟ್ಟಿ ಮಾತನಾಡಿ, ತುಳುಟ್ ದಾದ ಪನ್ಪುನಿ, ಮಸ್ತ್ ಮೋಕೆ ಮಾರಾಯ್ರೆ ( ತುಳುವಿನಲ್ಲಿ ಎಂತ ಮಾತಾಡುವುದು. ಬಹಳ ಪ್ರೀತಿ ಮಾರಾಯ್ರೆ ) ಎಂದಿದ್ದಾರೆ. ಐಶ್ವರ್ಯಾ ರೈ ಮಾತಾಡಿ " ನಮಸ್ಕಾರ, ಸೌಖ್ಯನಾ" ( ನಮಸ್ಕಾರ, ಸೌಖ್ಯವೆ?) ಎಂದಿದ್ದಾರೆ.
ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಯ ವಿನಂತಿಗೆ ಒಂದು ವಾಕ್ಯ ಪದವನ್ನು ತುಳುವಿನಲ್ಲಿ ಮಾತಾಡಿ ಇಬ್ಬರು ಸ್ಟಾರ್ ನಟರು ತಮ್ಮ ತುಳು ಅಭಿಮಾನವನ್ನು ಪ್ರದರ್ಶಿಸಿದ್ದಾರೆ.