LIC ಶೇರು ಮೌಲ್ಯ ಪ್ರಪಾತಕ್ಕೆ: ರೂ. 673 ತಲುಪಿದ ಶೇರು ಬೆಲೆ
LIC ಶೇರು ಮೌಲ್ಯ ಪ್ರಪಾತಕ್ಕೆ: ರೂ. 673 ತಲುಪಿದ ಶೇರು ಬೆಲೆ
LIC ಷೇರುಗಳು ಭಾರೀ ಇಳಿಕೆಯನ್ನು ಕಾಣುತ್ತಿದೆ. ನಿರಂತರವಾಗಿ ಇಳಿಕೆ ಕಾಣುತ್ತಿದೆ. ತನ್ನ ವಿತರಣೆಯ ಬೆಲೆಯಿಂದ ಸುಮಾರು ಶೇಕಡ 30ರಷ್ಟು ಕುಸಿತ ಕಂಡಿದೆ. ಈಗ LIC ಷೇರು ಬೆಲೆ ರೂಪಾಯಿ 675ಕ್ಕೆ ಇಳಿದಿದೆ.
ಹಣದುಬ್ಬರದ ನಡುವೆ RBI ರೆಪೋ ರೇಟ್ ಏರಿಕೆ ಮಾಡಿರುವುದು LIC ಷೇರು ಕುಸಿತದ ಮೇಲೆ ಪರಿಣಾಮವನ್ನು ಉಂಟು ಮಾಡಿದೆ. LIC ಷೇರು ಸೋಮವಾರ ಆರಂಭಿಕ ವಹಿವಾಟಿನ ವೇಳೆ ಹೊಸ ಸಾರ್ವಕಾಲಿಕ ಕುಸಿತ ರೂಪಾಯಿ 673ಕ್ಕೆ ತಲುಪಿದೆ. ಆದರೆ ವಹಿವಾಟಿನ ಅಂತ್ಯದಲ್ಲಿ ರೂಪಾಯಿ 673.70ಕ್ಕೆ ತಲುಪಿದೆ.
ಕಳೆದ ವಾರಾಂತ್ಯಕ್ಕೆ LIC ಷೇರು ಸಾರ್ವಕಾಲಿಕ ಕುಸಿತ ಕಂಡಿತ್ತು. ಇದೀಗ ಮತ್ತೆ ಸುಮಾರು ಶೇಕಡ ಐದರಷ್ಟು ಇಳಿಕೆ ಕಂಡು ರೂಪಾಯಿ 673.70ಕ್ಕೆ ತಲುಪಿದೆ. ಸೋಮವಾರ ಆರಂಭಿಕ ವಹಿವಾಟಿನಲ್ಲಿ ಮತ್ತೆ ಸಾರ್ವಕಾಲಿಕ ಕುಸಿತ ಕಂಡಿದೆ.
ಈ ಕುಸಿತದ ಬಗ್ಗೆ ನಾವು ಆತಂಕ ಹೊಂದಿದ್ದೇವೆ ಎಂದು ಸರ್ಕಾರ ಹೇಳಿಕೊಂಡಿದೆ. "ಈ ತಾತ್ಕಾಲಿಕ ಕುಸಿತದ ಬಗ್ಗೆ ನಾವು ಕಾಳಜಿ ಹೊಂದಿದ್ದೇವೆ. LIC ಬಗ್ಗೆ ತಿಳಿಯಲು ಜನರು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. LIC ನಿರ್ವಹಣಾ ತಂಡವು ಈ ಎಲ್ಲಾ ಅಂಶಗಳನ್ನು ಪರಿಗಣಿಸುತ್ತದೆ ಮತ್ತು ಷೇರುದಾರರ ಮೌಲ್ಯವನ್ನು ಹೆಚ್ಚಳ ಮಾಡಲು ನಾವು ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ" ಎಂದು ದೀಪಂ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.
LIC ಶೇರು ಸ್ಟಾಕ್ ಮಾರುಕಟ್ಟೆಯಲ್ಲಿ ಮೇ 17ರಂದು ತನ್ನ ವಿತರಣೆ ಬೆಲೆಗಿಂತ ಕುಸಿದು 872 ರೂಪಾಯಿಯಲ್ಲಿ ವಹಿವಾಟು ಆರಂಭ ಮಾಡಿದೆ. ಇದಾದ ಬಳಿಕ ನಾಲ್ಕು ಸೆಷನ್‌ಗಳಲ್ಲಿ ಮಾತ್ರ LIC ಷೇರು ಲಾಭವನ್ನು ಕಂಡಿದೆ. ಆದರೆ ಬಳಿಕ ಭಾರೀ ಇಳಿಕೆ ಕಾಣುತ್ತಿದೆ.