ಪಾತಾಳಕ್ಕೆ ಕುಸಿದ ಎಲ್‌ಐಸಿ ಷೇರು: ಹೂಡಿಕೆದಾರರಿಗೆ ರೂ. 1.2 ಲಕ್ಷ ಕೋಟಿ ನಷ್ಟ
ಪಾತಾಳಕ್ಕೆ ಕುಸಿದ ಎಲ್‌ಐಸಿ ಷೇರು: ಹೂಡಿಕೆದಾರರಿಗೆ ರೂ. 1.2 ಲಕ್ಷ ಕೋಟಿ ನಷ್ಟ
ಭಾರತದ ಅತಿ ದೊಡ್ಡ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮದ (LIC) ಷೇರುಗಳು ದಾಖಲೆ ಮಟ್ಟದ ಕುಸಿತ ಕಂಡಿದೆ. ಕಳೆದ ಎರಡು ದಿನಗಳಲ್ಲಿ ಶೆರು ಮಾರುಕಟ್ಟೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಸಾರ್ವಕಾಲಿಕ ಕುಸಿತ ಕಂಡಿದೆ.
ದಿನದ ವಹಿವಾಟಿನ ಅಂತ್ಯದಲ್ಲಿ 777.40ರ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಎಲ್‌ಐಸಿ ಷೇರು, ಮಂಗಳವಾರ ವಹಿವಾಟು ಅಂತ್ಯದಲ್ಲಿ 755.60 ರೂಪಾಯಿಗೆ ತಲುಪಿದೆ. ಮಂಗಳವಾರ ವಹಿವಾಟಿನ ಅಂತ್ಯದ ವೇಳೆಗೆ ಬಿಎಸ್‌ಇ ಸೂಚ್ಯಂಕದಲ್ಲಿ ಶೇಕಡ 2.80ರಷ್ಟು ಕುಸಿತ ಕಂಡಿದೆ.
ಶೇರು ಮಾರುಕಟ್ಟೆಯಲ್ಲಿ ಆರಂಭದ ಲಿಸ್ಟಿಂಗ್ ವೇಳೆಯಲ್ಲೇ LIC ಭಾರೀ ನಷ್ಟ ಕಂಡಿದೆ.
ಹೂಡಿಕೆದಾರರಿಗೆ ರೂ. 1.2 ಲಕ್ಷ ಕೋಟಿ ನಷ್ಟ
LIC ಹೂಡಿಕೆದಾರರಿಗೆ ಇದುವರೆಗೆ ರೂಪಾಯಿ 1.2 ಲಕ್ಷ ಕೋಟಿ ನಷ್ಟ ಉಂಟಾಗಿದೆ. LIC IPO ವೇಳೆ ಪ್ರತಿ ಶೇರಿನ ವಿತರಣೆ ಬೆಲೆ 949 ರೂಪಾಯಿ ಆಗಿತ್ತು. ಹಾಗೆಯೇ LIC ಮಾರುಕಟ್ಟೆ ಮೌಲ್ಯ ಆರು ಲಕ್ಷ ಕೋಟಿ ರೂಪಾಯಿ ಆಗಿತ್ತು. ಆದರೆ ಈಗ ಎಲ್‌ಐಸಿ ಮಾರುಕಟ್ಟೆ ಮೌಲ್ಯ 4.79 ಲಕ್ಷ ಕೋಟು ರೂಪಾಯಿಗೆ ಇಳಿಕೆ ಕಂಡಿದೆ.
ಇದೀಗ, RBI ರೆಪೋ ದರ ಮತ್ತೆ ಏರಿಕೆ ಮಾಡುವ ಸಾಧ್ಯತೆ ಇದೆ. ಇದರಿಂದ ಹೂಡಿಕೆದಾರರು ಶೇರು ಮಾರುಕಟ್ಟೆಯಿಂದ ಕೊಂಚ ದೂರ ಉಳಿದಿದ್ದಾರೆ. ಕೆಲವು ದಿನಗಳಿಂದ ಷೇರು ಮಾರುಕಟ್ಟೆಯು ನಷ್ಟವನ್ನು ಅನುಭವಿಸಿದೆ.