Mangalore- ಹಿಜಾಬ್ ಬೇಕೆನ್ನುವವರು ವಿದೇಶಕ್ಕೊಮ್ಮೆ ಹೋಗಿ ಬರಲಿ: ಯು.ಟಿ.ಖಾದರ್
Monday, June 6, 2022
ಮಂಗಳೂರು: ಹಿಜಾಬ್ ಬೇಕೆನ್ನುವ ವಿದ್ಯಾರ್ಥಿನಿಯರು ವಿದೇಶಕ್ಕೊಮ್ಮೆ ಹೋಗಿಬರಲಿ. ಪಾಕಿಸ್ಥಾನ, ಸೌದಿಯಂತಹ ದೇಶಗಳಿಗೆ ಹೋದರೆ ನಮ್ಮ ದೇಶದ ಮಹತ್ವ ತಿಳಿಯುತ್ತದೆ ಎಂದು ವಿಧಾನಸಭಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಹೇಳಿದರು.
ಹಿಜಬ್ ವಿವಾದ ವಿಚಾರವಾಗಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಇಲ್ಲಿ ಬೇಕಾದ ಹಾಗೆ ಮಾತನಾಡಬಹುದು, ಜಿಲ್ಲಾಧಿಕಾರಿಯವರನ್ನು ಭೇಟಿಯಾಗಬಹುದು, ಪ್ರೆಸ್ ಮೀಟ್ ಎಲ್ಲವನ್ನೂ ಮಾಡಬಹುದು. ಆದರೆ ದನ್ನೇ ವಿದೇಶಕ್ಕೆ ಹೋಗಿ ಮಾತನಾಡಲಿ ಆಗ ತಿಳಿಯುತ್ತದೆ ಎಂದು ಹೇಳಿದರು.
ಇಲ್ಲಿ ಹುಲಿಯ ಹಾಗೆ ಇದ್ದವರು, ಅಲ್ಲಿ ಬೆಕ್ಕಿನ ತರಹ ಆಗುತ್ತಾರೆ. ನಮ್ಮ ದೇಶದ ಕಾನೂನು ನೀಡಿರುವ ಅವಕಾಶದ ಮಹತ್ವ ತಿಳಿಯುತ್ತದೆ. ಇಲ್ಲಿ ದೊರಕುವವ ಸ್ವಾತಂತ್ರ್ಯದ ಅರಿವಾಗುತ್ತದೆ ಎಂದು ಹಿಜಾಬ್ ವಿದ್ಯಾರ್ಥಿನಿಯರಿಗೆ ಯು.ಟಿ.ಖಾದರ್ ಸಲಹೆ ನೀಡಿದರು.