Mangaluru- ಮಳಲಿ ಮಸೀದಿ ವಿವಾದ ಪ್ರಕರಣ: ಜೂ.17ಕ್ಕೆ ವಿಚಾರಣೆ ಮುಂದೂಡಿಕೆ
Tuesday, June 14, 2022
ಮಂಗಳೂರು: ನಗರದ ಹೊರವಲಯದಲ್ಲಿರುವ ಮಳಲಿ ಮಸೀದಿಯ ನವೀಕರಣ ಸಂದರ್ಭ ದೇಗುಲ ಶೈಲಿಯ ರಚನೆ ಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಯನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಹಾಗೂ ಸಿವಿಲ್ ನ್ಯಾಯಾಲಯದಲ್ಲಿ ಜೂ. 17 ಕ್ಕೆ ಮುಂದೂಡಿದೆ.
ಮಸೀದಿ ಆಡಳಿತ ಮಂಡಳಿಯ ಪರ ನ್ಯಾಯವಾದಿ ಎಂಪಿ ಶೆಣೈ ಇಂದು ವಾದ ಮಂಡಿಸಿ 'ವಿಹೆಚ್ ಪಿ ಸಲ್ಲಿಸಿದ ಅರ್ಜಿಯು ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಅದು ವಕ್ಫ್ ಕೋರ್ಟ್ ನಲ್ಲಿ ವಿಚಾರಣೆಯಾಗಬೇಕಾಗಿದೆ. ಅಲ್ಲದೆ ವಿಹೆಚ್ ಪಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವಂತೆ ವಾದ ಮಂಡಿಸಿದರು. ಈ ಬಗ್ಗೆ ಇತ್ತಂಡಗಳ ಪರ ವಕೀಲರೂ ವಾದ - ವಿವಾದ ಮಂಡಿಸಿದರು. ವಾದ - ವಿವಾದವನ್ನು ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಜೂ.17 ಕ್ಕೆ ಮುಂದೂಡಿದ್ದಾರೆ.
ಈ ವಿಚಾರದಲ್ಲಿ ನಿನ್ನೆಯಷ್ಟೆ ಹೈಕೋರ್ಟ್ ಜಿಲ್ಲಾ ಸಿವಿಲ್ ನ್ಯಾಯಾಲಯ ವಿಚಾರಣೆಯನ್ನಷ್ಟೇ ಮಾಡಬಹುದು. ಆದರೆ ಯಾವುದೇ ಕಾರಣಕ್ಕೂ ಆದೇಶ ನೀಡುವಂತಿಲ್ಲ ಎಂದು ಮಂಗಳೂರಿನ ಮೂರನೇ ಹೆಚ್ಚುವರಿ ಹಾಗೂ ಸಿವಿಲ್ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.