Mangaluru- ಮಳಲಿ ಮಸೀದಿ ವಿವಾದ ವಿಚಾರಣೆ ಜೂನ್ 9ಕ್ಕೆ ಮುಂದೂಡಿಕೆ
Monday, June 6, 2022
ಮಂಗಳೂರು: ಮಳಲಿ ಮಸೀದಿಯಲ್ಲಿ ದೇವಾಲಯ ಶೈಲಿಯ ಕಟ್ಟಡ ಗೋಚರ ಪ್ರಕರಣದ ವಿಚಾರದಲ್ಲಿ ಇಂದು ಜಿಲ್ಲಾ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ವಾದ-ವಿವಾದವನ್ನು ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಜೂನ್ 9ಕ್ಕೆ ಮುಂದೂಡಿ ಆದೇಶಿದ್ದಾರೆ.
ನಗರದ ಹೊರವಲಯದ ಮಳಲಿಯಲ್ಲಿರುವ ಮಸೀದಿನ್ನು ನವೀಕರಣ ಉದ್ದೇಶಕ್ಕೆ ಕೆಡವಲಾಗಿತ್ತು. ಈ ವೇಳೆ ಮಸೀದಿಯೊಳಗೆ ಹಿಂದೂ ದೇವಾಲಯ ಶೈಲಿಯ ಕಟ್ಟಡ ಪತ್ತೆಯಾಗಿತ್ತು. ಈ ವಿವಾದವೀಗ ಕೋರ್ಟ್ ಮೆಟ್ಟಿಲೇರಿದ್ದು, ಮಂಗಳೂರಿನ ಜಿಲ್ಲಾ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಇಂದು ನಡೆದ ವಿಚಾರಣೆಯಲ್ಲಿ ಮಸೀದಿಯ ವ್ಯಾಪ್ತಿಯ ಬಗ್ಗೆ ವಾದವಿವಾದಗಳು ನಡೆದಿದೆ. ಮಸೀದಿಯ ಆಡಳಿತ ಮಂಡಳಿಯ ಪರ ವಕೀಲರು ಇಂದು ವಾದ ಮಂಡಿಸಿದ್ದಾರೆ. ಆದರೆ ವಿಎಚ್ ಪಿ ಪರ ವಕೀಲರಿಗೆ ವಾದ ಮಂಡಿಸಲು ಜೂನ್ 9ರಂದು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಜೂನ್ 9ರಂದು ಮುಂದೂಡಲಾಗಿದೆ.