Mangaluru: ಪಿಯುಸಿ ಯಲ್ಲಿ Topper ಬಂದಿದ್ರೂ ಈಕೆಗೆ ಟಿವಿ ನೋಡಿಯೆ ಗೊತ್ತಾದದ್ದು...
Saturday, June 18, 2022
ಮಂಗಳೂರು: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ದ.ಕ.ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಆದರೆ ಮಂಗಳೂರಿನ ರಾಜ್ಯಕ್ಕೇ ಟಾಪರ್ ಬಂದಿರುವ ವಿದ್ಯಾರ್ಥಿನಿ ಈ ವಿಚಾರ ತಿಳಿದದ್ದು ಮಾತ್ರ ಮಾಧ್ಯಮದ ಮುಖೇನ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಹೌದು.. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪಿಯುಸಿ ಟಾಪರ್ ಆಗಿರುವ ಇಲ್ಹಮ್ ಅವರಿಗೆ ದ್ವಿತೀಯ ಪಿಯುಸಿಯಲ್ಲಿ 597 ಅಂಕ ಗಳಿಸಿದ್ದು ತಿಳಿದಿತ್ತಂತೆ. ಆದರೆ ತಾನು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೇ ಸೆಕೆಂಡ್ ಟಾಪರ್ ಆಗಿರೋದು ಮಾತ್ರ ಟಿವಿ ಮುಖಾಂತರ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಇಲ್ಹಮ್, ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಟಾಪರ್ ಬಂದಿರೋದು ಬಹಳ ಸಂತಸ ತಂದಿದೆ. ಮೊದಲ ಬಾರಿಗೆ ನನಗೆ ಅದನ್ನು ನಂಬುವುದೇ ಅಸಾಧ್ಯವಾಗಿತ್ತು. ಆದರೆ ಮಾಧ್ಯಮದಲ್ಲಿ ನಾನು ಸೆಕೆಂಡ್ ಟಾಪರ್ ಎಂದು ಸುದ್ದಿ ಬಿತ್ತರವಾದ ಬಳಿಕ ಅದು ಸ್ಪಷ್ಟವಾಯಿತು ಎಂದು ಇಲ್ಹಾಮ್ ಹೇಳಿದ್ದಾರೆ.
ಮುಂದೆ ತನ್ನ ಆಸಕ್ತಿಯ ಕ್ಷೇತ್ರ ಬಿಎಸ್ಇ ಕ್ಲಿನಿಕಲ್ ಸೈಕಾಲಜಿ ಮಾಡುತ್ತೇನೆ. ಮಂಗಳೂರಿನ ಯನೆಪೊಯ ಕಾಲೇಜಿನಲ್ಲಿ ಈ ವಿಚಾರದಲ್ಲಿ ವ್ಯಾಸಂಗ ಮಾಡುತ್ತೇನೆ. ಈಗಾಗಲೇ ನಾನು ರಿಜಿಸ್ಟ್ರೇಷನ್ ಮಾಡಿದ್ದೇನೆ. ಇದು ನಾಲ್ಕು ವರ್ಷಗಳ ಕೋರ್ಸ್. ಮುಂದಕ್ಕೆ ತಾನೋರ್ವ ಉತ್ತಮ ಕ್ಲಿನಿಕಲ್ ಸೈಕಾಲಜಿಸ್ಟ್ ಆಗುವೆ ಎಂಬ ಭರವಸೆ ಇದೆ ಎಂದು ಇಲ್ಹಮ್ ಹೇಳಿದರು.