![ಭಾರತದಲ್ಲಿ ನಡೆದ ಮೊದಲ ಸ್ವಯಂ ವಿವಾಹ: ತನ್ನನ್ನೇ ತಾನು ವಿವಾಹವಾದ ಕ್ಷಮಾ ಬಿಂದು ಭಾರತದಲ್ಲಿ ನಡೆದ ಮೊದಲ ಸ್ವಯಂ ವಿವಾಹ: ತನ್ನನ್ನೇ ತಾನು ವಿವಾಹವಾದ ಕ್ಷಮಾ ಬಿಂದು](https://blogger.googleusercontent.com/img/b/R29vZ2xl/AVvXsEiQX2sq6FnGMzHV2R5dJ47Z1iOArWzvnBOMVN-2loHUXVaQcOR4NaZZw-rUrLWiLoZDLURS60TREDY0JAN9irfySZfR_ptTB_VGAga1Fj89y5cDg7C8GE2IRVxXQm-_s8ed2nBmYKfegnVB/s1600/1654791589134480-0.png)
ಭಾರತದಲ್ಲಿ ನಡೆದ ಮೊದಲ ಸ್ವಯಂ ವಿವಾಹ: ತನ್ನನ್ನೇ ತಾನು ವಿವಾಹವಾದ ಕ್ಷಮಾ ಬಿಂದು
Thursday, June 9, 2022
ವಡೋದರಾ : ತನ್ನನ್ನೇ ತಾನೇ ವಿವಾಹವಾಗುತ್ತೇನೆಂದು ಭಾರೀ ಸುದ್ದಿಯಲ್ಲಿದ್ದ ಗುಜರಾತ್ ನ ಯುವತಿ ಕ್ಷಮಾ ಬಿಂದು ಮದುವೆ ಅದ್ಧೂರಿಯಾಗಿ ನಡೆದಿದೆ. ಇದು ತನ್ನನ್ನೇ ತಾನು ಮದುವೆಯಾಗಿರುವ ಭಾರತದಲ್ಲಿ ನಡೆದಿರುವ ಪ್ರಥಮ ಪ್ರಕರಣ.
ಬಿಜೆಪಿ ನಾಯಕಿ ಈ ವಿವಾಹವನ್ನು ವಿರೋಧಿಸಿದ್ದರು. ಅಲ್ಲದೆ ದೇವಸ್ಥಾನದಲ್ಲಿ ವಿವಾಹಕ್ಕೆ ಅಡ್ಡಿ ಬಂದಿತ್ತು. ಆದ್ದರಿಂದ ಅನಗತ್ಯ ವಿವಾದ ತಪ್ಪಿಸಲು ಕ್ಷಮಾ ಬಿಂದು ನಿಗದಿಯಾಗಿರುವ ಮದುವೆ ದಿನಕ್ಕಿಂತ ಮೊದಲೇ ವಿವಾಹವಾಗಿದ್ದಾರೆ. ವಿವಾಹವಾದ ಬಳಿಕ ಕ್ಷಮಾ ಬಿಂದು ಎಲ್ಲರಿಗೂ ವೀಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಅಂದ ಹಾಗೇ ಕ್ಷಮಾ ಬಿಂದು ಸಂಪ್ರದಾಯದ ಪ್ರಕಾರವೇ ವಿವಾಹವಾಗಿದ್ದಾರೆ. ಮೆಹಂದಿ, ಹಲ್ದಿ ಕಾರ್ಯಕ್ರಮವನ್ನು ಮಾಡಿಕೊಂಡಿದ್ದರು. ವಿವಾಹವಾದ ಬಳಿಕ ಅವರು ಎರಡು ವಾರಗಳ ಕಾಲ ಗೋವಾದಲ್ಲಿ ಹನಿಮೂನ್ ನಡೆಸಲಿದ್ದಾರೆಂತೆ.