-->
ಜೇಬಿನಿಂದ ಹಣ ಕದ್ದಿರುವ ಶಂಕೆ: ತಂದೆಯೇ ಪುತ್ರನ ಕಡಿದು ನೆತ್ತರು ಹರಿಸಿದ

ಜೇಬಿನಿಂದ ಹಣ ಕದ್ದಿರುವ ಶಂಕೆ: ತಂದೆಯೇ ಪುತ್ರನ ಕಡಿದು ನೆತ್ತರು ಹರಿಸಿದ

ನವಸರಿ(ಗುಜರಾತ್​): ಜೇಬಿನಿಂದ ಹಣ ಕದ್ದಿರುವ ಶಂಕೆಯಿಂದ 19 ವರ್ಷದ ಪುತ್ರನನ್ನು ತಂದೆಯೊಬ್ಬ ಕೊಡಲಿಯಿಂದ ಕಡಿದು ಕೊಲೆಗೈದಿರುವ ಘಟನೆ ಗುಜರಾತ್​ನ ನವಸರಿ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. 

ಸಾಹಿಲ್​ ಎಂಬಾತ ಕೊಲೆಯಾದ ಯುವಕ. ಭಾಗುಭಾಯ್​ ಎಂಬಾತ ಪುತ್ರನನ್ನೇ ಕೊಂದಿರುವ ತಂದೆ.

ಆಗಷ್ಟೇ ಮಂಗಳವಾರದ ಬೆಳಗು ಮೂಡಿತ್ತು. ಆದರೆ, ಅಷ್ಟರಲ್ಲಿ ಭಾಗುಭಾಯ್​ ತನ್ನ ಮನೆಯಲ್ಲಿ ಮಲಗಿದ್ದ ಪುತ್ರನ ಹತ್ಯೆಗೈದು ನೆತ್ತರು ಹರಿಸಿದ್ದ. ಈ ಬಗ್ಗೆ ಸ್ವತಃ ಭಾಗುಭಾಯ್​ ಪತ್ನಿ ಚಂಚಲ್​ಬೆನ್​ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. "ಬೆಳಗ್ಗೆ 6 ಗಂಟೆಯಾಗಿತ್ತು. ತಾನು ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದೆ. ನನ್ನ ಪತಿ ಭಾಗುಭಾಯ್ ಎಚ್ಚರಗೊಂಡಿದ್ದರೂ ಹಾಸಿಗೆಯಲ್ಲಿ ಮಲಗಿದ್ದ. ಪುತ್ರ ಸಾಹಿಲ್​ ಇನ್ನೂ ಮಲಗಿಕೊಂಡಿದ್ದ. ಈ ವೇಳೆಯೇ ನನಗೆ ಜೋರಾದ ಶಬ್ದವೊಂದು ಕೇಳಿತು. ನಾನು ಓಡಿ ಬಂದು ನೋಡಿದರೆ, ನನ್ನ ಗಂಡನ ಕೈಯಲ್ಲಿ ಕೊಡಲಿ ಇತ್ತು. ಆತನ ಎರಡ್ಮೂರು ಬಾರಿ ಮಗನ ಕುತ್ತಿಗೆಗೆ ಹೊಡೆದಿದ್ದ. ಇದರಿಂದ ಮಗ ಸಾಹಿಲ್​ ರಕ್ತದ ಮಡುವಿನಲ್ಲೇ ಮಲಗಿದ್ದ" ಎಂದು ತಾಯಿ ಹೇಳಿದ್ದಾರೆ.

ಆರೋಪಿ ತಂದೆ ದಿನಗೂಲಿ ಕಾರ್ಮಿಕನಾಗಿದ್ದ. ಮೃತ ಮಗ​ 10ನೇ ತರಗತಿ ಓದಿದ್ದ. ಆದರೆ, ಆತ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಸದ್ಯದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಿಎಸ್​ಐ ಎಸ್​.ಎಸ್​.ಮಾಲ್​ ತಿಳಿಸಿದ್ದಾರೆ. ಈ ಬಗ್ಗೆ ಖೇರ್​ಗ್ರಾಮ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article