ಲೇಡಿ ಸೂಪರ್ ಸ್ಟಾರ್ ನಯನತಾರಾ ಮದುವೆಯ ಬಳಿಕದ ಈ ನಿರ್ಧಾರದಿಂದ ಅಭಿಮಾನಿಗಳಿಗೆ ಬೇಸರ
Tuesday, June 14, 2022
ಚೆನ್ನೈ: ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ಸಿನಿಮಾ ನಿರ್ದೇಶಕ ವಿಘ್ನೇಶ್ ಶಿವನ್ ವಿವಾಹವಾಗಿರೋದು ಎಲ್ಲರಿಗೂ ಗೊತ್ತೇ ಇದೆ. ಇದೀಗ ತಾರಾದಂಪತಿ ತಿರುಪತಿ ಸೇರಿದಂತೆ ಕೇರಳದ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ.
ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸುಮಾರು 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯೂ ಹೌದು. ಇದೀಗ ಅವರು ಶಾರುಖ್ ಖಾನ್ ಅಭಿನಯದ ಅಟ್ಲೀ ನಿರ್ದೇಶನದ ಜವಾನ್ ಸಿನಿಮಾ ಮೂಲಕ ಬಾಲಿವುಡ್ಗೂ ಪದಾರ್ಪಣೆ ಮಾಡಿದ್ದಾರೆ.
ಆದರೆ ಮದುವೆಯಾದ ಬಳಿಕ ನಯನಾತಾರ ಅಭಿಮಾನಿಗಳಿಗೆ ನಿರಾಶೆಯನ್ನು ಉಂಟು ಮಾಡುವಂತಹ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಅದೇನೆಂದರೆ ಮುಂದೆ ತಾನು ಯಾವುದೇ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸೋದಿಲ್ಲ ಹಾಗೂ ಅರೆಬೆತ್ತಲೆ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಈ ಸಂದೇಶವನ್ನು ಅವರು ತಮ್ಮ ನಿರ್ಮಾಪಕರುಗಳಿಗೂ ರವಾನಿಸಿದ್ದಾರಂತೆ. ಇಂಟಿಮೇಟ್ ದೃಶ್ಯಗಳಿಗೆ ಬ್ರೇಕ್ ಹಾಕಿ, ಇನ್ನು ಮುಂದೆ ವಿಷಯಾಧಾರಿತ ಅಥವಾ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಲು ನಯನಾತಾರಾ ನಿರ್ಧಾರ ಮಾಡಿದ್ದಾರೆ. ಇದು ನಯನಾತಾರರನ್ನು ಬೋಲ್ಡ್ ಪಾತ್ರಗಳಲ್ಲಿ ನೋಡಲು ಬಯಸುವ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಅಲ್ಲದೆ ಕುಟುಂಬದ ಕಡೆ ಗಮನ ಹರಿಸಲು ನಿರ್ಧರಿಸಿರುವ ನಯನಾತಾರಾ ತಮ್ಮ ಬಿಡುವಿನ ಸಮಯದಲ್ಲಿ ಮಾತ್ರ ಶೂಟಿಂಗ್ನಲ್ಲಿ ಭಾಗವಹಿಸಲಿದ್ದಾರೆ. ನಿರ್ಮಾಪಕರಿಗೆ ಈ ಬಗ್ಗೆ ಮೊದಲೇ ಷರತ್ತನ್ನು ತಿಳಿಸಿದ್ದಾರೆ. ಸದ್ಯ ನಯನಾತಾರ ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.