Nelyadi -ಬೆಥನಿ ಜ್ಞಾನೋದಯದಲ್ಲಿ 20022-23 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳ ನೇಮಕ..
Sunday, June 12, 2022
ನೆಲ್ಯಾಡಿ
ನೆಲ್ಯಾಡಿ ಬೆಥನಿ ಜ್ಞಾನೋದಯ ಇಂಗ್ಲಿಷ್ ಮೀಡಿಯಂ ಶಾಲೆಯ 2022-23ನೇ ಸಾಲಿನ ಶಿಕ್ಷಕ-ರಕ್ಷಕ ಸಮಿತಿಯನ್ನು ರಚಿಸಲಾಯಿತು.
ಬೆಥನಿ ಸಂಸ್ಥೆಯ ನಿರ್ದೇಶಕರಲ್ಲಿ ಓರ್ವರಾದ ವಂದನೀಯ ರೇವರೆಂಡ್ ಫಾದರ್ ಡಾ. ವರ್ಗಿಸ್ ಕೈಪನಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
2022-23ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಅಬ್ರಹಾಂ ಕೆ. ಪಿ ಕಾರ್ಯದರ್ಶಿಯಾಗಿ ಶಿಕ್ಷಕಿ ನಯನಾ, ಉಪಾಧ್ಯಕ್ಷರುಗಳಾಗಿ ಸುಮಯ ಹಾಗೂ ರೋಷನ್ ಜಮೀರ್, ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಪ್ರಮೀಳಾ, ರಾಜೇಶ್ವರಿ, ಮನೋಜ್ ಜಾರ್ಜ್, ಜಯರಾಜ್, ಶ್ರೀನಿ, ದಿನಕರ್, ಡಿಂಪಲ್, ಪೂವಪ್ಪ, ಅಶುರಾ, ಹಮೀರ್, ಸುಧಾಕರ್, ನಾರಾಯಣ, ಸನ್ನಿ ಕೆ.ಎಸ್, ಆಫ್ಸಲ್ ,ಗಂಗಾಧರ್ ಶೆಟ್ಟಿ, ಪ್ರಕಾಶ್, ರೆಜಿ ಕೆ.ಜೆ, ಪೂರ್ಣಿಮಾ, ರಘುವೀರ್, ಶಾಜಿ ಎಂಬವರು ಆಯ್ಕೆಯಾದರು.
ಈ ಸಮಯದಲ್ಲಿ ಶಾಲಾ ಪ್ರಿನ್ಸಿಪಾಲ್ ರೆ. ಫಾ ತೋಮಸ್ ಬಿಜಿಲಿ, ಮಾಜಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಂಗಾಧರ್ ಶೆಟ್ಟಿ, ಶಾಲಾ ಆಡಳಿತ ಸಮಿತಿ ಪದಾಧಿಕಾರಿಗಳಾದ ರೆ.ಫಾ ಮೇಲ್ವಿನ್ ಒ.ಐ.ಸಿ, ರೆ. ಫಾ. ಜೈಸನ್ ಸೈಮನ್, ಪ್ರಾದ್ಯಾಪಕರುಗಳಾದ ಜೋಸ್ ಎಂ.ಜೆ, ಜಾರ್ಜ್ ತೋಮಸ್, ಸುಶೀಲ್ ಕುಮಾರ್ ಸೇರಿದಂತೆ ಪ್ರಮುಖರು,ಶಾಲಾ ಶಿಕ್ಷಕರು, ಮಕ್ಕಳ