ಸುಳ್ಯ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ವಿರುದ್ಧ ಪೊಕ್ಸೊ ಪ್ರಕರಣ ದಾಖಲು
Friday, July 1, 2022
ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಯುವಕನೋರ್ವನ ಮೇಲೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರಿನ ಅರಿಯಡ್ಕ ನಿವಾಸಿ ಸಂದೀಪ್ (22) ಎಂಬಾತನ ಮೇಲೆ ಪೊಕ್ಸೊ ಪ್ರಕರಣ ದಾಖಲಾಗಿದೆ.
ಲೈಂಗಿಕ ಕಿರುಕುಳ ನೀಡಿರುವ ಆರೋಪಿ ಸಂದೀಪ್ ಬಾಲಕಿಗೆ ದೂರದ ಸಂಬಂಧಿಯಾಗಿದ್ದ. ಅವರಿಬ್ಬರೂ ಕೆಲ ಸಮಯಗಳಿಂದ ದೂರವಾಣಿ ಸಂಪರ್ಕದಲ್ಲಿದ್ದರು. ಕೆಲ ತಿಂಗಳಿನ ಹಿಂದೆ ದೊಡ್ಡಪ್ಪನ ಪೂಜೆಗೆ ಹೋಗಿದ್ದ ವೇಳೆ ಸಂದೀಪ್ ರಾತ್ರಿ ವೇಳೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಿಲಾಗಿದೆ. ಯಾರಲ್ಲಾದರೂ ಈ ವಿಚಾರ ತಿಳಿಸಬಾರದೆಂದು ಆತ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ.
ಇದೀಗ ಸಂದೀಪ್ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.