Raid on Club- ಪ್ರಭಾವಿ ರಾಜಕೀಯ ಮುಖಂಡನ ತಮ್ಮನ ರಿಕ್ರಿಯೇಷನ್ ಕ್ಲಬ್‌ಗೆ ದಾಳಿ- 28 ಮಂದಿ ಸೆರೆ
ಪ್ರಭಾವಿ ರಾಜಕೀಯ ಮುಖಂಡನ ತಮ್ಮನ ರಿಕ್ರಿಯೇಷನ್ ಕ್ಲಬ್‌ಗೆ ದಾಳಿ- 28 ಮಂದಿ ಸೆರೆ
ಬಂಟ್ವಾಳ ತಾಲೂಕು ಬಿ.ಸಿ.ರೋಡಿನಲ್ಲಿ ನಡೆಯುತ್ತಿದ್ದ ರಿಕ್ರಿಯೇಷನ್ ಕ್ಲಬ್‌ಗೆ ಪೊಲೀಸರು ದಾಳಿ ನಡೆಸಿದ್ದು, 28 ಮಂದಿಯನ್ನು ಬಂಧಿಸಲಾಗಿದೆ.
ಈ ಹಿಂದೆ ಕಾಂಗ್ರೆಸ್ ಮುಖಂಡರಾಗಿದ್ದ, ಕೆಲ ವರ್ಷಗಳ ಹಿಂದಷ್ಟೇ ಆಡಳಿತಾರೂಢ ಪಕ್ಷ ಸೇರಿ ನಿಗಮವೊಂದರ ಅಧ್ಯಕ್ಷರಾದ ಪ್ರಭಾವೀ ರಾಜಕಾರಣಿಯ ಸಹೋದರರೊಬ್ಬರು ಬಿ.ಸಿ.ರೋಡ್‌ನಲ್ಲಿ ಈ ರಿಕ್ರಿಯೇಷನ್ ಕ್ಲಬ್ ನಡೆಸುತ್ತಿದ್ದರು.
ಈ ಕೇಂದ್ರದ ಮೇಲೆ ಬಂಟ್ವಾಳ ಎಎಸ್ಪಿಯವರ ಮಾರ್ಗದರ್ಶನದ ಮೇರೆಗೆ ಬಂಟ್ವಾಳ ನಗರದ ಪೊಲೀಸ್ ಇನ್ಸ್ಪೆಕ್ಟರ್ ವಿವೇಕಾನಂದ ನೇತೃತ್ವದ ಪೊಲೀಸರ ತಂಡ ದಿಢೀರ್ ದಾಳಿ ನಡೆಸಿ ಸುಮಾರು26,900 ರೂಪಾಯಿ ನಗದು ಸಹಿತ 28 ಆರೋಪಿಗಳನ್ನು ಬಂಧಿಸಿದೆ.
ಬಿ.ಸಿ. ರೋಡಿನ ಪದ್ಮ ಕಾಂಪ್ಲೆಕ್ಸ್ ನಲ್ಲಿ ಈ ರಿಕ್ರಿಯೇಷನ್ ಕ್ಲಬ್ ನಡೆಸುತ್ತಿದೆ. ಜುಗಾರಿ ಸಹಿತ ಎಲ್ಲ ಅಕ್ರಮ ದಂಧೆಗಳು ನಡೆಯುತ್ತಿದೆ ಎಂಬ ಬಗ್ಗೆ ಖಚಿತ ವರ್ತಮಾನದ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಇನ್ಸ್ಪೆಕ್ಟರ್ ವಿವೇಕಾನಂದ ಮತ್ತವರ ಪೊಲೀಸ್ ತಂಡ ದಾಳಿ ನಡೆಸಿತ್ತು.
ದ.ಕ. ASP ಶಿವಾಂಶು ರಜಪೂತ್ ಅನುಮತಿ ಮೇರೆಗೆ ಪೊಲೀಸರ ದಾಳಿಯ ವಾಸನೆ ಹಿಡಿದ ಆರೋಪಿಗಳು ತಾವು ಜೂಜಾಟಕ್ಕೆ ಬಳಸುತ್ತಿದ್ದ ಹಣದ ನೋಟುಗಳ ರಾಶಿಯನ್ನು ಕಿಟಕಿ ಮೂಲಕ ಬಿಸಾಡಿದ್ದರು ಎನ್ನಲಾಗಿದೆ.
ನೋಟುಗಳ ರಾಶಿ ಕಿಟಕಿಯಿಂದ ಹೊರ ಚೆಲ್ಲುತ್ತಿದ್ದಂತೆ ಇದನ್ನು ನೋಡಿದ ಜನರು ಗುಂಪು ಗುಂಪಾಗಿ ಬಂದು ಅದನ್ನು ಹೆಕ್ಕಿ ಖುಷಿಯಿಂದ ಜಾಗ ಖಾಲಿ ಮಾಡಿದ್ದರು. ಈ ವೇಳೆ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.
ಪೊಲಿಸರು ನೋಟು ಹೆಕ್ಕುತ್ತಿದ್ದವರ ಪೈಕಿ ಕೆಲವರನ್ನು ವಶಪಡಿಸಿಕೊಂಡಿದ್ದಾರೆ. ರಿಕ್ರಿಯೇಷನ್ ಕ್ಲಬ್‌ನಲ್ಲಿದ್ದ ಜುಗಾರಿಗೆ ಬಳಸಿದ್ದ ಹಣವನ್ನು ಸ್ವಾಧೀನಕ್ಕೆ ತೆಗೆದುಕೊಂಡಿರುವ ಪೊಲೀಸರು 28 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.