-->
ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಲೈವ್ ಸ್ಟ್ರೀಮ್ ಮಾಡಿದ ಕಾಮುಕರು: ಗ್ವಾಲಿಯರ್​ನಲ್ಲಿ ಆಘಾತಕಾರಿ ಘಟನೆ

ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಲೈವ್ ಸ್ಟ್ರೀಮ್ ಮಾಡಿದ ಕಾಮುಕರು: ಗ್ವಾಲಿಯರ್​ನಲ್ಲಿ ಆಘಾತಕಾರಿ ಘಟನೆ

ಗ್ವಾಲಿಯರ್: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ, ಅದರ ದೃಶ್ಯವನ್ನು ಲೈವ್ ಮಾಡಿರುವ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಬೆಳಕಿಗೆ ಬಂದಿದೆ. 16 ವರ್ಷದ ಅಪ್ರಾಪ್ತೆಯ ಮೇಲೆ 21ವರ್ಷದ ಯುವಕರಿಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ಈ ಕೃತ್ಯವನ್ನು ನೇರಪ್ರಸಾರ ಮೂಲಕ ತಮ್ಮ ಸ್ನೇಹಿತರಿಗೆ ತೋರಿಸಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾಳೆ.

ತನ್ನನ್ನು ಹೋಟೆಲೊಂದಕ್ಕೆ ಕರೆದೊಯ್ದ ಈ ಯುವಕರಿಬ್ಬರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಅಲ್ಲದೆ ಅತ್ಯಾಚಾರದ ದೃಶ್ಯವನ್ನು ಚಿತ್ರೀಕರಿಸಿ ತಮ್ಮ ಸ್ನೇಹಿತರಿಗೆ 'ಲೈವ್​ ಸ್ಟ್ರೀಮ್'​ ಮಾಡಿದ್ದಾರೆ ಎಂದು ಸಂತ್ರಸ್ತೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದಾಳೆ.

ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಪೊಕ್ಸೊ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Ads on article

Advertise in articles 1

advertising articles 2

Advertise under the article