![ಗೋವಾ ಬೀಚ್ ನಲ್ಲಿ ಬ್ರಿಟಿಷ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅರೆಸ್ಟ್ ಗೋವಾ ಬೀಚ್ ನಲ್ಲಿ ಬ್ರಿಟಿಷ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅರೆಸ್ಟ್](https://blogger.googleusercontent.com/img/b/R29vZ2xl/AVvXsEjDC_fLTavHtb5iAB3siKg5cbKb4TADpJhh504D5vf7kA40C-WuBvyUUANAkzYmtyYjzo3AdvQwhxZDATEJjMfHbYHbG1V2VvsXycDZ8vKDJ1vlDmaB4PFb8e5b1Y2Hwor4ZL6TIMCZZQ4q/s1600/1654581254771225-0.png)
ಗೋವಾ ಬೀಚ್ ನಲ್ಲಿ ಬ್ರಿಟಿಷ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅರೆಸ್ಟ್
Tuesday, June 7, 2022
ಪಣಜಿ: ಗೋವಾದ ಅರಂಬೋಲ್ ಬೀಚ್ ಹಾಗೂ ಸ್ವೀಟ್ ಲೇಕ್ ನಲ್ಲಿ ಬ್ರಿಟಿಷ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಕಾಮುಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಜೋಯೆಲ್ ವಿನ್ಸೆಂಟ್ ಪಿರೇರಾ ಬಂಧಿತ ಕಾಮುಕ. ಈತ ಬ್ರಿಟಿಷ್ ಮಹಿಳೆ ಬೀಚ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಲಾಗಿದೆ.
ಪತಿಯೊಂದಿಗೆ ಪ್ರವಾಸಕ್ಕೆಂದು ಬಂದಿದ್ದ ಈ ಸಂತ್ರಸ್ತೆ ಸೋಮವಾರ ಈ ಬಗ್ಗೆ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.